April 14, 2026
  • ಔರಾದ್ ತಾಲ್ಲೂಕಿನ ನಾಗುರ (ಎಂ ) ದಲ್ಲಿ ಭಾರತದ ಸಂವಿಧಾನ ಶಿಲ್ಪಿ, ಜ್ಞಾನಯೋಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು.
    ಮುಗ್ತಪ್ಪ ಗಿರಣಿ, ಸಂಜು ಸಾಗರ್, ಅನಿಲ ಬಾಂಬ್ರೆ, ಗಣಪತಿ, ಶಾಲಿವಾನ್ ಬಂಗಾರೆ, ಶ್ರೀಕಾಂತ್ ಬ್ಯಾಂಬ್ರೇ, ರತಿಕಾಂತ, ಅವಿನಾಶ ಬಿರಾದಾರ್ ಇದ್ದರು.
    ಔರಾದ್
    ಸಮಾನತೆ, ಸಾಮಾಜಿಕ ನ್ಯಾಯ, ಜ್ಞಾನ ಮತ್ತು ಮಾನವ ಹಕ್ಕುಗಳ ಸಂಕೇತವಾಗಿ ಈ ದಿನವನ್ನು ದೇಶಾದ್ಯಂತ ಹಾಗೂ ವಿಶ್ವದಾದ್ಯಂತ ವಿಶೇಷವಾಗಿ 135ನೇ ಜನ್ಮದಿನೋತ್ಸವದ (2026) ಅಂಗವಾಗಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ಸಮಾಜ ಸೇವಕ ಅನಿಲ್ ಬ್ಯಾಂಬ್ರೇ ನುಡಿದರು.
    ಮಂಗಳವಾರ ತಾಲೂಕಿನ ನಾಗೂರ ಎಂ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಸಂಜು ಕುಮಾರ್ ಸಾಗರ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜಗತ್ತಿಗೆ ನೀಡಿದ ಅಂಬೇಡ್ಕರ್ ಅವರ ಇತಿಹಾಸ ಎಲ್ಲರಿಗೂ ತಿಳಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.ಮುಗ್ತಪ್ಪ ಗಿರಣಿ, ,, ಗಣಪತಿ, ಶಾಲಿವಾನ್ ಬಂಗಾರೆ, ಶ್ರೀಕಾಂತ್ ಬ್ಯಾಂಬ್ರೇ, ರತಿಕಾಂತ, ಅವಿನಾಶ ಬಿರಾದಾರ್ ಇದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771