ಔರಾದ : ಕಲ್ಯಾಣ ಕರ್ನಾಟಕದ ಪ್ರಭಾವಿ ನಾಯಕ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಾರ್ಥಿಸಿ ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಯುವ ಮುಖಂಡ ಸುನೀಲಕುಮಾರ ದೇಶಮುಖ ಅವರು ಮಾತನಾಡಿ ಮಾನ್ಯ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಅವರು ಈ ಭಾಗದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗ ಗೆಲ್ಲಲು ಖಂಡ್ರೆ ಪಾತ್ರ ಮಹತ್ವದ್ದು, ಸುಮಾರು ಮೂರು ಸಾರಿ ಕೆಪಿಸಿಸಿ ಕಾರ್ಯ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಎಲ್ಲ ಸಮುದಾಯದವರನ್ನು ಜೋತೆಯಾಗಿ ತೆಗೆದುಕೊಂಡು ಹೋಗುವ ನಾಯಕತ್ವ ಅವರಲ್ಲಿದೆ. ದೇಶಕ್ಕೆ ಸ್ವತಂತ್ರ ಬಂದಾಗಿನಿಂದ ಅವರ ಪರಿವಾರ ಕಾಂಗ್ರೆಸ್ ಪಕ್ಷದೊಂದಿಗೆ ಪಕ್ಷ ನಿಷ್ಠೆ ಹೊಂದಿದೆ. ಅವರ ತಂದೆ ಲೋಕ ನಾಯಕ ಭೀಮಣ್ಣ ಖಂಡ್ರೆ ಅವರು ಸಹ ಪಕ್ಷಕ್ಕೆ ಅನೇಕ ಕೊಡುಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುನೀಲಕುಮಾರ ದೇಶಮುಖ, ನೇಹರು ಪಾಟೀಲ, ಶರಣಪ್ಪ ಪಾಟೀಲ, ಜಗನ್ನಾಥ ನಿರ್ಮಳೆ, ಶಿವಶಂಕರ ಎಕಲಾರ, ಪ್ರಶಾಂತ ಫುಲಾರಿ, ಡಾ.ಮಹೇಶ ಫುಲಾರಿ, ಲಕ್ಷ್ಮಣ ಎಸ್. ದೇವಕತೆ, ಸುಧಾಕರ ಕೊಳ್ಳೂರ,ಆನಂದ ಗಲಗಲೆ, ವೈಜಿನಾಥ ವಡಿಯಾರ, ಸುನೀಲ ಮಿತ್ರಾ, ಸೂರ್ಯಕಾಂತ, ಆನಂದ ಕಾಂಬಳೆ, ಶಿವು ಹಳೆಂಬುರೆ ಸೇರಿದಂತೆ ಅನೇಕರಿದ್ದರು.
