*ಔರಾದ(ಬಿ) ಕ್ಷೇತ್ರ ಅಭಿವೃದ್ಧಿಯತ್ತ ದಾಪುಗಾಲು: ಶಾಸಕ ಪ್ರಭು ಚವ್ಹಾಣ
ಕಮಲನಗರ ತಾಲ್ಲೂಕಿನ ಮಾಳೆಗಾಂವ ಪಂಚಾಯಿತಿ ವ್ಯಾಪ್ತಿಯಲ್ಲಿ 2360 ಕೋಟಿ ಮೊತ್ತದ ಪವರ್ ಗ್ರಿಡ್ ಸಬ್ ಸ್ಟೇಷನ್ ಸ್ಥಾಪನೆ, ನಾಗೂರ(ಬಿ)ನಲ್ಲಿ 220 ಕೆ.ವಿ ವಿದ್ಯುತ್ ಉಪ ಕೇಂದ್ರ, 560 ಕೋಟಿಯ 36 ಕೆರೆ ತುಂಬಿಸುವ ಯೋಜನೆ, ಹೆಡಗಾಪೂರನಲ್ಲಿ ಜಾನುವಾರು ತಳಿ ಸಂವರ್ಧನಾ ಕೇಂದ್ರ ಸೇರಿದಂತೆ ಅನೇಕ ಮಹತ್ತರ ಯೋಜನೆಗಳು ನಡೆಯುತ್ತಿದ್ದು, ಔರಾದ ಕ್ಷೇತ್ರ ಅಭಿವೃದ್ಧಿಯತ್ತ ಮುನ್ನುಗತ್ತಿದೆ ಎಂದು ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಪ್ರಭು ಚವ್ಹಾಣ ಅಭಿಮಾನಿ ಬಳಗದಿಂದ ಔರಾದ(ಬಿ) ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜೂನ್ 6ರಂದು ನಡೆದ ಜನ್ಮದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ಚೀಕರಿಸಿ ಮಾತನಾಡಿದರು.
ಔರಾದ(ಬಿ) ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು, ಅದರಂತೆ ಎಲ್ಲ ಕ್ಷೇತ್ರಗಳ ಉನ್ನತಿಗಾಗಿ ಮಾಸ್ಟರ್‌ಪ್ಲಾನ್ ರಚಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಶಿಕ್ಷಣ, ನೀರಾವರಿ, ಸಂಪರ್ಕ ಮೂರು ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆಯನ್ನಾಗಿ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರಕ್ಕೆ ದೊಡ್ಡ ಯೋಜನೆಯನ್ನು ತರಬೇಕೆಂಬ ಉದ್ದೇಶದಿಂದ ನಿರಂತರ ಶ್ರಮಿಸಿದ್ದೇನೆ. ಅದರ ಪ್ರತಿಫಲವಾಗಿ ಕೆಂದ್ರದಿಂದ 2360 ಕೋಟಿ ಮೊತ್ತದ ಪವರ್ ಗ್ರಿಡ್ ಸಬ್ ಸ್ಟೇಷನ್ ಬಂದಿದೆ. ಕಮಲಗನರ ತಾಲ್ಲೂಕಿನ ಮಾಳೇಗಾಂವ ಪಂಚಾಯಿತಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಉದ್ಘಾಟಿಸಲು ಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ಈ ಕೇಂದ್ರ ಆರಂಭವಾಗುತ್ತಿದ್ದಂತೆ ಕ್ಷೇತ್ರದ ಅನೇಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಅಲ್ಲಿ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್, ನೀರಿನ ಟ್ಯಾಂಕ್, ಜೆಸಿಬಿ, ಟಿಪ್ಪರ್ ಸೇರಿದಂತೆ ಸಾಕಷ್ಟು ವಾಹಗಳನ್ನು ಸ್ಥಳೀಯವರಿಂದ ಪಡೆಯಲಾಗಿದೆ. ಸಣ್ಣ ಪುಟ್ಟ ಕಾರ್ಮಿಕರು ಕೂಡ ಕಮಲನಗರ ತಾಲ್ಲೂಕಿನವರೇ ಇದ್ದಾರೆ. ಅದರಂತೆ ಕ್ಷೇತ್ರದಲ್ಲಿ ಸುಮಾರು 30 ಸಾವಿರ ಎಕರೆಯಲ್ಲಿ ಬೃಹತ್ ಸೋಲಾರ್ ಪಾರ್ಕ್ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ನಾಗೂರ(ಬಿ)ನಲ್ಲಿ 118 ಕೋಟಿ ವೆಚ್ಚದ 220 ಕೆ.ವಿ ವಿದ್ಯುತ್ ಉಪ ಕೇಂದ್ರ, 560 ಕೋಟಿಯ 36 ಕೆರೆ ತುಂಬಿಸುವ ಯೋಜನೆ, ಹೆಡಗಾಪೂರನಲ್ಲಿ 32 ಕೋಟಿಯ ಜಾನುವಾರು ತಳಿ ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರ, ಕಮಲಗರ ಮಿನಿ ವಿಧಾನಸೌಧ ಸೇರಿದಂತೆ ಹತ್ತು ಹಲವು ಪ್ರಗತಿ ಕೆಲಸಗಳಾಗಿವೆ. ಅತ್ಯಂತ ಹಿಂದುಳಿದ ತಾಲ್ಲೂಕೆಂದು ಕರೆಸಿಕೊಳ್ಳುತ್ತಿದ್ದ ಔರಾದ ಕ್ಷೇತ್ರ ಇಂದು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.
ಕೆರೆ ತುಂಬಿಸುವ ಯೋಜನೆ, ಕಾರಂಜಾ ಜಲಾಶಯದಿಂದ ನೀರು ಸರಬರಾಜು, ಸಿಪೆಟ್ ಕೇಂದ್ರ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ರಾಜ್ಯ ಸರ್ಕಾರದಿಂದಾಗಿ ವಿಳಂಬವಾಗುತ್ತಿವೆ. ನಮ್ಮ ಕೆಲಸಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೂ ನಾನು ಸುಮ್ಮನೆ ಬಿಡುವುದಿಲ್ಲ. ಕ್ಷೇತ್ರಕ್ಕೆ ಮಂಜೂರಾಗಿರುವ ಎಲ್ಲ ಕೆಲಸಗಳನ್ನು ಮಾಡಿಯೇ ತೀರುತ್ತೇನೆ ಎಂದು ಭರವಸೆ ನೀಡಿದರು.
ನಾನು ಶಾಸಕನಾಗುವ ಪೂರ್ವದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತಿತ್ತು. ವಿದ್ಯಾರ್ಥಿಗಳು, ಶಿಕ್ಷಕರಿಗೆ ಸನ್ಮಾನ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ, ಹೆಚ್ಚು ಅಂಕಗಳಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ನಗದು ಬಹುಮಾನದಂತಹ ವಿವಿಧ ಕಾರ್ಯಕ್ರಮಗಳಿಂದಾಗಿ ಫಲಿತಾಂಶ ಸುಧಾರಿಸಿದ್ದು, ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಯಲ್ಲಿ ಪ್ರಥಮ ಬಂದಿರುವುದಕ್ಕೆ ಸಂತೋಷವಿದೆ. ಈ ಎಲ್ಲ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿವೆ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡಿ, ಶಿಕ್ಷಣ ಕ್ಷೇತ್ರದ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಶಾಸಕ ಪ್ರಭು ಬಿ.ಚವ್ಹಾಣ ಅವರು ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ, ವಿದ್ಯಾರ್ಥಿಗಳು ಮತು ಶಿಕ್ಷಕರಿಗೆ ಸನ್ಮಾನದಂತಹ ಕೆಲಸಗಳು ಎಲ್ಲರಿಗೂ ಮಾದರಿ ಎಂದು ಬಣ್ಣಿಸಿದರು. ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿದರು.
ಡೋಣಗಾಂವ ಮಠದ ಪೂಜ್ಯ ಶಂಭುಲಿಂಗ ಶಿವಾಚಾರ್ಯರು, ಹೆಡಗಾಪೂರ ಮಠದ ಪೂಜ್ಯ ಶಿವಲಿಂಗ ಶಿವಾಚಾರ್ಯರು, ಗುಡಪಳ್ಳಿ ಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯರು, ಠಾಣಾ ಕುಶನೂರ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಹಿಪ್ಪಳಗಾಂವನ ಪೂಜ್ಯ ಭಂತ್ಯೆ ಬೋಧಿರತ್ನ, ಪೂಜ್ಯ ಝಾಪಾ ಮಹಾರಾಜ, ಪೂಜ್ಯ ಸಾಯಿಗಾಂವ ಮಹಾರಾಜರು, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪೂರೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಮುಖಂಡರಾದ ವಸಂತ ಬಿರಾದಾರ, ರಾಜಶೇಖರ ನಾಗಮೂರ್ತಿ, ಗುರುನಾಥ ಜ್ಯಾಂತಿಕರ್, ವಿಜಯಕುಮಾರ ಪಾಟೀಲ ಗಾದಗಿ, ಸುಭಾಷ ಬಿರಾದಾರ, ಶಶಿ ಹೊಸಳ್ಳಿ, ವೀರಣ್ಣ ಕಾರಬಾರಿ, ರಾಜೇಂದ್ರ ಪೂಜಾರಿ, ಶಿವರಾಜ ಅಲ್ಮಾಜೆ, ಸುರೇಷ ಭೋಸ್ಲೆ, ಸತೀಷ ಪಾಟೀಲ, ಧೊಂಡಿಬಾ ನರೋಟೆ, ರಮೇಶ ಉಪಾಸೆ, ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ಕೇರಬಾ ಪವಾರ, ಸಂತೋಷ ಪೋಕಲವಾರ, ದಯಾನಂದ ಘೂಳೆ, ಚೇತನ ಕಪ್ಪಿಕೇರಿ, ಅಬ್ಜಲ್ ಪಠಾಣ, ಪ್ರದೀಪ ಪವಾರ, ಬಸವರಾಜ ಪಾಟೀಲ ಕಮಲನಗರ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ರಂಗರಾವ ಜಾಧವ, ಸುಜಿತ ರಾಠೋಡ, ಸಂಜು ವಡೆಯರ್, ಸಂದೀಪ ಪಾಟೀಲ, ಪ್ರಕಾಶ ಅಲ್ಮಾಜೆ, ಬಸವರಾಜ ಹಳ್ಳೆ, ಯಾದು ಮೇತ್ರೆ, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ರವೀಂದ್ರ ರೆಡ್ಡಿ, ಪ್ರಕಾಶ ಜೀರ್ಗೆ, ರಾಜಕುಮಾರ ಸೋರಳ್ಳಿ, ಅಶೋಕ ಅಲ್ಮಾಜೆ, ಶಿವು ಪಾಂಚಾಳ, ಸಚಿನ ರಾಠೋಡ, ಪ್ರತೀಕ ಚವ್ಹಾಣ, ಸಚಿನ ಬಿರಾದಾರ, ಸಂಜು ಮುರ್ಕೆ, ಬಾಲಾಜಿ ವಾಗ್ಮಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
*ನೂರಾರು ಅಭಿಮಾನಿಗಳಿಂದ ರಕ್ತದಾನ:*
ಮಾಜಿ ಸಚಿವರು ಹಾಗೂ ಔರಾದ (ಬಿ)ಶಾಸಕರಾದ ಪ್ರಭು ಬಿ.ಚವ್ಹಾಣ ಅವರ 57ನೇ ಜನ್ಮದಿನದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಔರಾದ ಪಟ್ಟಣದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ನೂರಾರು ಅಭಿಮಾನಿಗಳು, ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಬೆಳಿಗ್ಗೆ ತಮ್ಮ ಸ್ವಗ್ರಾಮವಾದ ಘಮಸುಬಾಯಿ ತಾಂಡಾದಲ್ಲಿರುವ ಇಚ್ಚಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಉದ್ಭವಲಿಂಗ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಹಾಗೂ ಅಭಿಷೇಕ ನೆರವೇರಿಸಿ, ಉತ್ತಮ ಮಳೆ-ಬೆಳೆ ಹಾಗೂ ಔರಾದ (ಬಿ) ಮತ್ತು ಕಮಲನಗರ ತಾಲ್ಲೂಕುಗಳ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ನಂತರ ಗೋಶಾಲೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದ ಅವರು, ಔರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಔರಾದ ತಾಲ್ಲೂಕು ಕ್ರೀಡಾಂಗಣದಲ್ಲಿ 57 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಂದೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶಾಸಕರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
