July 6, 2026

*ಶಾಸಕ ಪ್ರಭು ಚವ್ಹಾಣ ಜನ್ಮದಿನ ಗಮನ ಸೆಳೆದ ನಾಣ್ಯದ ಹಾರ*

 

ಔರಾದ: ಶಾಸಕ ಪ್ರಭು ಬಿ. ಚವ್ಹಾಣ ಅವರ 57ನೇ ಜನ್ಮದಿನದ ಅಂಗವಾಗಿ ನಡೆದ ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರು ಹಾಕಿದ ವಿಶೇಷ ನಾಣ್ಯದ ಹಾರ ಎಲ್ಲರ ಗಮನ ಸೆಳೆಯಿತು.

 

 

ಜನ್ಮದಿನದ ಶುಭಾಶಯ ಕೋರಲು ಆಗಮಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಬೆಂಬಲಿಗರು ಶಾಸಕ ಪ್ರಭು ಚವ್ಹಾಣ ಅವರಿಗೆ ಶುಭಾಶಯ ಕೋರಿದರು. ಅದರಲ್ಲಿ ಯುವ ಮುಖಂಡ ಆನಂದ ಪಿ.ದ್ಯಾಡೆ ಅವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನಿಂದ ವಿಶೇಷವಾಗಿ ನಾಣ್ಯಗಳಿಂದ ತಯಾರಿಸಲಾದ ವಿಶೇಷ ಹಾರವನ್ನು ಹಾಕಿ ಗೌರವ ಸಲ್ಲಿಸಿದರು.

 

ಈ ಅಪರೂಪದ ಗೌರವ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು.

ಜನ್ಮದಿನದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳು ನಡೆದವು. ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿ, ಶಾಸಕ ಚವ್ಹಾಣ ಅವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಶುಭ ಹಾರೈಸಿದರು.

 

 

ಈ ಸಂದರ್ಭದಲ್ಲಿ ಪ್ರಭು ಚವ್ಹಾಣ ಅವರ ಅಭಿಮಾನಿಗಳು, ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದು, ಶಾಸಕ ಪ್ರಭು ಚವ್ಹಾಣ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771