May 9, 2026

ಭಾಲ್ಕಿ ಪಟ್ಟದೇವರು ಗಡಿಭಾಗದಲ್ಲಿ ಶಾಲಾ, ಕಾಲೇಜುಗಳು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕೃತಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ ಎಂದು ಔರಾದ ಮಾನ್ಯ ತಹಸೀಲ್ದಾರಾದ ಮಹೇಶ ಪಾಟೀಲ ಹೇಳಿದರು.

 

ಸಂತಪೂರ ಅನುಭವ ಮಂಟಪದಲ್ಲಿ ರವಿವಾರ 103ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ಸಂತಪೂರ ಸಿದ್ದರಾಮೇಶ್ವರ ಕಾಲೇಜು ಜಿಲ್ಲೆಗೆ, ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ 8 ವರ್ಷಗಳಿಂದ ಪ್ರತಿಶತ ಫಲಿತಾಂಶ ಮತ್ತು ಅನುಭವ ಮಂಟಪ ಗುರುಕುಲ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನ ಜೊತೆಗೆ 16 ವರ್ಷಗಳಿಂದ ಪ್ರತಿಶತ ಫಲಿತಾಂಶ ಪಡೆಯುತ್ತಿರುವುದು ಸಂಪೂರ್ಣ ಶ್ರೇಯಸ್ಸು ಭಾಲ್ಕಿ ಪಟ್ಟದೇವರಿಗೆ ಸಲ್ಲುತ್ತದೆ ಎಂದರು.

 

ದಿವ್ಯನೆತೃತ್ವ ವಹಿಸಿದ ಪೂಜ್ಯಶ್ರೀ ಗುರುಬಸವ ಪಟ್ಟದೇವರು ಮಾತನಾಡಿ ಪ್ರತಿಯೊಬ್ಬ ಪ್ರಜೆ ಸುಖ, ಶಾಂತಿ,ನೆಮ್ಮದಿ ಮತ್ತು ಸಮಾಧಾನ ದೊರಕಬೇಕಾದರೆ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಜ್ಞಾನಕ್ಕೆ ಇಡೀ ಜಗತ್ತೇ ತಲೆಬಾಗುತ್ತದೆ, ವಿದ್ಯಾರ್ಥಿಗಳು ಜ್ಞಾನದ ರತ್ನಗಳಾಗಬೇಕು. ಸಂತಪೂರ ಸಿದ್ದರಾಮೇಶ್ವರ ಕಾಲೇಜು, ಅನುಭವ ಮಂಟಪ ಗುರುಕುಲ, ಜ್ಞಾನಭಾರತಿ ಶಾಲೆ ಮಕ್ಕಳ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಆಶೀರ್ವಚನ ನೀಡಿದರು.

 

ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿ ಮಾತನಾಡಿದರು.

ಡಾ. ಸಂಜೀವಕುಮಾರ ಜುಮ್ಮಾ ಪ್ರಸ್ತಾವಿಕ ಮಾತನಾಡಿದರು.

 

ರಾಜಕುಮಾರ ಮಾಳಗೆ ಗುತ್ತಿಗೆದಾರರು ಹೈದ್ರಾಬಾದ ಗುರುಬಸವ ಪೂಜೆ ನೆರವೇರಿಸಿದರು.

ಡಾ. ಅಭಿಷೇಕ ಸ್ವಾಮಿ, ಬಸವರಾಜ ಬಿರಾದರ ಇದ್ದರು.

 

ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಸ್ವಾಗತಿಸಿದರು, ಮುಖ್ಯ ಗುರುಗಳು ಶಿವಕುಮಾರ ಹಿರೇಮಠ ವಂದಿಸಿದರು, ಸಂಗಮೇಶ ಬ್ಯಾಳೆ ನಿರೂಪಿಸಿದರು, ಹಾವಗಿರಾವ ಶೆಂಬೆಳ್ಳಿ ಮತ್ತು ಗೋವಿಂದರೆಡ್ಡಿ ವಚನ ಸಂಗೀತ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771