April 27, 2026

ಔರಾದ: ತಾಲೂಕಿನ ಬೋರಳ್ ಗ್ರಾಮದಲ್ಲಿ ಜರುಗಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತ್ಯೋತ್ಸವ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಔರಾದ ತಾಲೂಕಿನ ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಚವ್ಹಾಣ್ ಅವರು ದೇಶಕ್ಕೆ ಸಂವಿಧಾನ ನಿಡಿ ದೇಶದ ಭವಿಷ್ಯ ಬರೆದವರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂದು ನಾನು ಮಂತ್ರಿಯಾಗಿ, MLA ಆಗಿ ಮೆರಿತಿದಿನ ಅಂದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರೆ ಕಾರಣ ಇದೆ ಮಾತನ್ನು ಸ್ವತ: ದೇಶದ ಪ್ರಧಾನಿ ನರೆಂದ್ರ ಮೋದಿ ಕೂಡ ದೇಹಲಿಯ ಕೆಂಪು ಕೋಟೆಯ ಮೆಲೆ ನಿಂತು ಹೇಳಿದ್ದಾರೆ ಎಂದು ಹೇಳಿದ್ದರು.

 

ನನ್ನಂತಹ ಶೋಷಿತ ಸಮುದಾಯಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇವರಾಗಿದ್ದಾರೆ, ಅವರ ಜನ್ಮ ಜಯಂತಿಯನ್ನು ಉತ್ಸವದಂತೆ ಆಚರಿಸಬೇಕು ಎಂದು ಹೇಳಿದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತಿಯ ಬೌದ್ಧ ಮಹಾಸಭಾದ ಜಿಲ್ಲಾ ಕಾಯ೯ದಶಿ೯ಯಾದ ಸೂಯ೯ಕಾಂತ ಶಿಂಗೇ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತ ಸಮುದಾಯದ ನಾಯಕರಲ್ಲ ಅವರು ದೇಶದ ಪ್ರತಿಯೊಂದು ಸಮುದಾಯದ ಮಹಾನಾಯಕ. ಅವರು ದೇಶಕ್ಕೆ ನಿಡಿದ ಕೊಡುಗೆಗಳೆ ಅದಕ್ಕೆ ಸಾಕ್ಷಿ. ಇಂದು ದೇಶದ ಪ್ರತಿಯೊಂದು ಸಮುದಾಯ ಅವರ ಋಣದಲ್ಲಿ ಬದುಕುತ್ತಿದೆ ಎಂದು ಹೇಳಿದರು.

 

ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತಿಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಅರಹಂತ ಸಾವಳೆ ಮಾತನಾಡಿ ತಾಲೂಕಿನಲ್ಲಿ ಪ್ರಭು ಚವ್ಹಾಣ್ ಅವರು ಶಾಸಕರಾದ ನಂತರ ಅಭಿವೃದ್ಧಿ ಕೆಲಸಗಳು ಶಿಘ್ರ ಗತಿಯಲ್ಲಿ ನಡೆಯುತ್ತಿವೆ. ಯಾವುದೆ ಜಾತಿ, ಸಮುದಾಯದಲ್ಲಿ ತಾರತಮ್ಯ ಮಾಡದೆ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶ ದೊರೆಯುವಂತೆ ಶಾಸಕರು ಕೆಲಸ ಮಾಡುತಿದ್ದಾರೆ ಎಂದು ಹೇಳಿದರು.

 

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕನಾ೯ಟಕ ಪಬ್ಲಿಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಿವಾಜಿರಾವ್ ಬೋರಳೆ ಅವರು ವಹಿಸಿದರು. ಸಾಗರ್ ಪಾಟಿಲ್ ಕೊಳ್ಳುರ್, ಶೀವಾಜಿರಾವ ಪಾಟಿಲ್, ಶೀವರಾಜ ಅಲಮಾಜೆ, ರತ್ನದೀಪ ಕಸ್ತೂರೆ, ಮಂಜು ಸ್ವಾಮಿ, ಮಹಾದೇವ ಜುಬ್ರೇ, ಸೋಪನರಾವ್ ಡೊಂಗ್ರೆ, ಲಕ್ಷ್ಮಣ ತುರೆ, ಸಂಜು ಡೊಂಗ್ರೆ, ಪ್ರದೀಪ್ ಗುಬ್ನೂರೆ, ಬಜರಂಗ ಪಾಂಡ್ರೇ, ಸಂಜು ಬೋರಳೆ, ಗಜಾನಂದ, ಯಶವಂತ, ಮಿಥುನ್, ಉತ್ತಮ್, ಶಶಿಕಾಂತ, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ನಂದಾದೀಪ ಬೋರಳೆ ನಿರೂಪಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771