ಔರಾದ:-ತಾಲ್ಲೂಕಿನ ಸಂತಪುರ ಜನತಾ ಪ್ರವೀಣ ಸ್ವತಂತ್ರ ಪದವಿ ಪೂರ್ವ ಪಿ ಯುಸಿ ಕಾಲೇಜಿನ ವಿದ್ಯಾರ್ಥಿನಿ ನಿಕಿತಾ ಬಾಬುರಾವ್ ಅವಳು 2025.26ನೇ ಸಾಲಿನ ಪಿಯುಸಿ ಕಲಾ ವಿಭಾಗದಲ್ಲಿ 600ಅಂಕಗಳ ಪೈಕಿ 571(95.16%) ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಟಾಪರ್ ಆಗಿ ಹೊರಹೊಮ್ಮಿದ ಪ್ರಯುಕ್ತ ಶನಿವಾರ ವಿದ್ಯಾರ್ಥಿನಿ ಸ್ವಗ್ರಾಮ ನಾಗುರ (ಎಂ )ದಲ್ಲಿ ಅವರಿಗೆ ಶಾಲು ಹೊಂದಿಸಿ ಸನ್ಮಾನಿಸಿ ಸಿಹಿ ತಿನ್ನಿಸಿ, ಅಭಿನಂಧಿಸಲಾಯಿತು. ಹಿರಿಯ ಪತ್ರಕರ್ತ ಮಲ್ಲಪ್ಪ ಗೌಡ, ಅನೀಲ್ ಮಡಿವಾಳ, ಕುಶಲರಾವ ಮಾನುರೆ, ಶ್ರೀದೇವಿ,ಸಚಿನ್, ಸೌರವ, ಓಂ ಪ್ರಸಾದ ಇದ್ದರು.
