ಔರಾದ್:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಔರಾದ್ ಘಟಕ ವತಿಯಿಂದ ತಾಲೂಕ ಪಂಚಾಯತ್ ಸಭಾಂಗಣ ಔರಾದನಲ್ಲಿ ಶನಿವಾರ ಮಧ್ಯಾಹ್ನ 2.00 ಗಂಟೆಗೆ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು ಭಾಗವಹಿಸಬೇಕೆಂದು ತಾಲೂಕ ಅಧ್ಯಕ್ಷರು ಪಂಡರಿನಾಥ್ ಆಡೆ ಮನವಿ ಮಾಡಿದ್ದಾರೆ.
ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ, 2025 ಅಕ್ಟೋಬರ್ ನಿಂದ ಜೂನ್ 2026 ವರೆಗಿನ ಎಲ್ಲ ಇಲಾಖೆ ಸೇವಾ ನಿವೃತ್ತ ಸರ್ಕಾರಿ ನೌಕರರಿಗೆ, ನೂತನವಾಗಿ ಆಯ್ಕೆಯಾದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಔರಾದ ಮತ್ತು ಕಮಲ ನಗರ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ನಿರ್ದೇಶಕರಿಗೆ ಈ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಉದ್ಘಾಟಕರಾಗಿ ಮಹೇಶ್ ಪಾಟೀಲ್ ತಹಸಿಲ್ದಾರರು ಹಾಗೂ ದಂಡಾಧಿಕಾರಿಗಳು ಔರಾದ್, ಮುಖ್ಯ ಅತಿಥಿಗಳಾಗಿ ಕಿರಣ್ ಪಾಟೀಲ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಔರಾದ,
ರಘುವೀರ್ ಸಿಂಗ್ ಠಾಕೂರ್, ಅರಕ್ಷಕ ವೃತ್ತ ನಿರೀಕ್ಷಕರು ಪೊಲೀಸ್ ಠಾಣೆ ಔರಾದ,ವಾಗಂಬರ್ ಗಾಯಕ್ವಾಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಔರಾದ, ಪತ್ರಕರ್ತರ ಸಂಘದ ಅಧ್ಯಕ್ಷರು ಶಿವಾನಂದ ಮುಕ್ತೆದಾರ್, ಕಾರ್ಯದರ್ಶಿಗಳು ಅನಿಲ ದೇಶಮುಖ ಭಾಗವಹಿಸಲಿದ್ದಾರೆ ಎಂದು ಕರಾಸನೌ ಸಂಘದ ತಾಲೂಕ ಅಧ್ಯಕ್ಷರು ಆಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
