March 31, 2026

ಔರಾದ: ತಾಲೂಕಿನ ಮಹಾರಾಜವಾಡಿ ಗ್ರಾಮದ ಮಾಹದೇವ್ ಮಂದಿರದಲ್ಲಿ ಅಖಂಡ ಹರೀನಾಮ ಸಪ್ತಾಹವು ಏಳು ದಿನಗಳ ಕಾಲ ಭಕ್ತಿಪೂರ್ವಕವಾಗಿ ಯಶಸ್ವಿಯಾಗಿ ನೆರವೇರಿತು.

ಸಪ್ತಾಹದ ಅಂಗವಾಗಿ ಪ್ರತಿದಿನ ಭಗವಂತನ ನಾಮಸ್ಮರಣೆ, ಭಜನೆ ಹಾಗೂ ಕೀರ್ತನೆಗಳು ನಿರಂತರವಾಗಿ ಜರುಗಿದವು. ಭಕ್ತರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಭಕ್ತಿರಸ ತುಂಬಿದರೆ, ಗ್ರಾಮದಾದ್ಯಂತ ಧಾರ್ಮಿಕ ವಾತಾವರಣ ಮೂಡಿಬಂದಿತ್ತು.

ಈ ಸಂದರ್ಭದಲ್ಲಿ ಭಗವನರಾವ್ ಪಾಟೀಲ್ ಅವರು ಜ್ಞಾನೇಶ್ವರಿ ಪಾರಾಯಣ ಮತ್ತು ಭಾಗವತ ಕಥೆಗಳ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಸಂದೇಶಗಳನ್ನು ನೀಡಿದರು. ಈ ಕಾರ್ಯಕ್ರಮಗಳು ಭಕ್ತರಲ್ಲಿ ಧಾರ್ಮಿಕ ಚಿಂತನೆ ಮತ್ತು ಆತ್ಮೀಯತೆಯನ್ನು ಹೆಚ್ಚಿಸಿತು.

ಅಖಂಡ ಹರೀನಾಮ ಸಪ್ತಾಹವು ಗ್ರಾಮಸ್ಥರಲ್ಲಿ ಭಕ್ತಿಭಾವವನ್ನು ವೃದ್ಧಿಸುವುದರ ಜೊತೆಗೆ, ಸಮುದಾಯದಲ್ಲಿ ಆಧ್ಯಾತ್ಮಿಕ ಜಾಗೃತಿಗೆ ದಾರಿ ಮಾಡಿಕೊಟ್ಟಿತು.

ಈ ವೇಳೆ ಮಚೆಂದರ್ ಪಾಟೀಲ್, ಭಗವನರಾವ್ ಪಾಟೀಲ್, ವಿಶ್ವನಾಥ್ ಗೋಡೆ, ಘಾಳೆಪ್ಪ ಮಹಾರಾಜ್, ವಿಶ್ವನಾಥ್ ಹುಲ್ಸುರೆ, ಸಂದೀಪ್ ಪಾಟೀಲ್, ಗೋವಿಂದರಾವ್ ನಿಟ್ಟೂರೆ, ಗೋಪಾಳರಾವ್, ಬಾಲಾಜಿ ನಿಟ್ಟೂರೆ, ಗ್ಯಾನೊಬರಾವ್, ತುಕಾರಾಮ್, ವಿಠಲ್, ನಾಗನಾಥ್ ನಿಟ್ಟೂರೆ, ಮಾದಪ್ಪ ಹುಲ್ಸುರೆ, ತಾನಾಜಿ ಸೇರಿದಂತೆ ಅನೇಕ ಗ್ರಾಮಸ್ಥರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771