March 30, 2026

ಔರಾದ:-ಔರಾದ ಶಾಸಕರಾದ ಪ್ರಭು ಬಿ. ಚವ್ಹಾಣ ತಾಲ್ಲೂಕಿನ ಲಾಧಾ ಗ್ರಾಮದಲ್ಲಿ ನಿರ್ಮಿಸಲಾದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಅವರ ಮೂರ್ತಿಯನ್ನು ಮಠಾಧೀಶರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಾ.29 ರಂದು ಲೋಕಾರ್ಪಣೆಗೊಳಿಸಿದರು.

 

ಬಳಿಕ ಮಾತನಾಡಿದ ಅವರು, ಬಸವಣ್ಣನವರು ಜಗತ್ತಿಗೆ ಪಾರ್ಲಿಮೆಂಟ್ ಪರಿಕಲ್ಪನೆಯನ್ನು ನೀಡಿದ ಮಹಾನ್ ವ್ಯಕ್ತಿ. ಅವರ ಚಿಂತನೆಗಳನ್ನು ವಿಶ್ವದ ಮಟ್ಟದಲ್ಲಿ ಪಸರಿಸಬೇಕೆಂಬ ಉದ್ದೇಶದಿಂದ ತಾವು ಸಚಿವರಾಗಿದ್ದಾಗ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಯೋಜನೆಗೆ ಒಪ್ಪಿಗೆ ನೀಡಿದಷ್ಟೇ ಅಲ್ಲದೆ 600 ಕೋಟಿ ಅನುದಾನ ನೀಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಕಾಮಗಾರಿ ಪೂರ್ಣಗೊಳ್ಳುತ್ತಿರುವ ಹಂತದಲ್ಲಿದೆ ಎಂದು ತಿಳಿಸಿದರು.

 

ಪೂಜ್ಯ ಚನ್ನಬಸವ ಪಟ್ಟದೇವರು, ಪೂಜ್ಯ ಬಸವಲಿಂಗ ಪಟ್ಟದೇವರ ಆಶಯವೂ ಇದಾಗಿತ್ತು. ಅದರಂತೆ ಬೀದರ ಜಿಲ್ಲಾ ರಂಗಮAದಿರಕ್ಕೆ ಚನ್ನಬಸವ ಪಟ್ಟದೇವ ರಂಗಮAದಿರವೆAದು ನಾಮಕರಣ ಮಾಡಿರುವುದು ನನ್ನ ಸೌಭಾಗ್ಯ. ಮುಂದಿನ ದಿನಗಳಲ್ಲಿ ಬಸವಣ್ಣನವರ ನಾಡು ಅಂತಾರಾಷ್ಟಿçÃಯ ಪ್ರವಾಸಿ ತಾಣವಾಗುವತ್ತ ಸಾಗುತ್ತಿರುವುದಕ್ಕೆ ಬಹಳಷ್ಟು ಸಂತೋಷವಾಗುತ್ತದೆ. ತಾವು ಬಸವಣ್ಣನವರ ಅನುಯಾಯಿಯಾಗಿದ್ದು, ಅವರ ಆಶಯದಂತೆ ಜನಸೇವೆ ಮಾಡುತ್ತಿದ್ದೇನೆ ಎಂದರು.

 

ಮಹಾಜನತೆಯ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪ ಹೊಂದಿದ್ದೇನೆ. ಸಂತಪೂರದಲ್ಲಿ ಬೃಹತ್ ಮೂರ್ತಿ ನಿರ್ಮಿಸಲಾಗಿದೆ. ಸಂತಪೂರ, ವಡಗಾಂವ ಹಾಗೂ ಮತ್ತಿತರೆ ಕಡೆಗಳಲ್ಲಿ ಅನುಭವ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲೆಡೆ ಬಸವಣ್ಣನವರ ವಿಗ್ರಹಗಳು ಸ್ಥಾಪನೆಯಾಗಬೇಕು ಎಂಬ ಆಶಯವಿದೆ. ಈ ಕಾರ್ಯಕ್ಕೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.

 

ಲೋಕಸಭೆ ಸದಸ್ಯರಾದ ಸಾಗರ ಖಂಡ್ರೆ ಮಾತನಾಡಿ, ಬಸವಣ್ಣನವರ ವಚನಗಳನ್ನು ಎಲ್ಲರೂ ಓದಬೇಕು. ಅವರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಡೆದಂತೆ ನುಡಿ ಎನ್ನುವ ವಾಣಿಯಂತೆ ಬದುಕಬೇಕು ಎಂದು ತಿಳಿಸಿದರು.

 

ವಿಶೇಷ ಉಪನ್ಯಾಸ ನೀಡಿದ ಬೈಲೂರು ಮಠದ ಪೂಜ್ಯ ನಿಜಗುಣಾನಂದ ಸ್ವಾಮಿಜಿಯವರು ಮಾತನಾಡಿ, ಮೂರ್ತಿಗಳು ಇತಿಹಾಸವನ್ನು ಹೇಳಿಕೊಡುತ್ತವೆ. ಅದರಂತೆ ಬಸವಣ್ಣನವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಇವುಗಳು ಮಾಡುತ್ತವೆ. ಅದರಂತೆ ನಾವು ಕೂಡ ಜಗತ್ತಿನಲ್ಲೇ ಶ್ರೇಷ್ಟವಾದ ಬಸವ ಪರಂಪರೆಯನ್ನು, ಧರ್ಮವನ್ನು ಉಳಿಸಿ ಬೆಳೆಸುವ ಸಂಕಲ್ಪದೊAದಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

 

ಔರಾದ(ಬಿ) ತಾಲ್ಲೂಕಿನಲ್ಲಿ ಬಸವಪರ ಕೆಲಸಗಳು ಹೆಚ್ಚಾಗಿ ನಡೆಯುತ್ತಿರುವುದಕ್ಕೆ ಸಂತೋಷಾಗುತ್ತಿದೆ. ಅದರಂತೆ ಕ್ಷೇತ್ರದೆಲ್ಲೆಡೆ ಬಸವಣ್ಣನವರ ಪ್ರತಿಮೆಗಳು ನಿರ್ಮಾಣವಾಗಬೇಕು. ಇದಕ್ಕೆ ಕ್ಷೇತ್ರದ ಶಾಸಕರ ಸಹಕಾರವೂ ಬೇಕು ಎಂದು ತಿಳಿಸಿದಾಗ ಶಾಸಕರು ಪ್ರತಿಕ್ರಿಯಿಸಿ ಈ ಕೆಲಸಕ್ಕೆ ನಾನು ಸದಾ ಸಿದ್ಧ ಎಂದು ಭರವಸೆ ನೀಡಿದರು.

 

ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರ ಹೆಸರಿನಲ್ಲಿ ಅಪಾರವಾದ ಶಕ್ತಿಯಿದೆ. ಬಸವನಾಮ ಜಪಿಸಿದವರಿಗೆ ಜೀವ ಭಯವೂ ಇರುವುದಿಲ್ಲ. ಹಾಗಾಗಿ ಬಸವಣ್ಣನವರನ್ನು ಭಕ್ತಿಭಾವದಿಂದ ಜಪಿಸಬೇಕು. ಅವರ ವಚನಗಳನ್ನು ಪಠಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

 

ಪೂಜ್ಯ ಅಕ್ಕ ಗಂಗಾAಬಿಕೆ ತಾಯಿ ಮಾತನಾಡಿ, ಎಲ್ಲರೂ ಲಿಂಗ ಧಾರಣೆ ಮಾಡಿ ಪ್ರತಿದಿನ ವಚನ ಪಠಣ ಮಾಡುವುದನ್ನು ರೂಢಿಸಿಕೊಳ್ಳಬೇಕು. ಬಸವ ಧರ್ಮದಂತೆ ಜೀವನ ರೂಪಿಸಿಕೊಳ್ಳಬೇಕು. ಇಲ್ಲ-ಸಲ್ಲದ ಮಾತುಗಳಿಗೆ ಕಿವಿಗೊಡದೇ ಬಸವಣ್ಣನವರ ಸಂದೇಶಗಳನ್ನು ಪಾಲಿಸಬೇಕು ಎಂದು ಹೇಳಿದರು. ಹುಲಸೂರು ಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿ, ಸಾಯಿಗಾಂವ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು.

 

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ಮುಖಂಡರಾದ ಭಸವರಾಜ ಧನ್ನೂರ, ಅಲ್ಲಮಪ್ರಭು ನೌದಗೇರೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಶಿವಕುಮಾರ ಘಾಟೆ, ವಿಜಯಕುಮಾರ ಪಾಟೀಲ ಯನರಳ್ಳಿ, ಮಹಾದೇವ ಮಿಠಾರೆ, ನಾಗಪ್ಪ ಮುಸ್ತಾಪೂರ ಸೇರಿದಂತೆ ಬಸವ ಸಂಘಟನೆಗಳ ಪ್ರಮುಖರು, ಅಭಿಮಾನಿಗಳು ಹಾಗೂ ಸಾರ್ವಜಿಕರು ಉಪಸ್ಥಿತರಿದ್ದರು. ಮಾರುತಿ ಗಾದಗೆ ಪ್ರಾಸ್ತಾವಿಕ ಮಾತನಾಡಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771