ಭಾಲ್ಕಿ ಹಿರೇಮಠದ ಪೂಜ್ಯಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಭಾರತೀಯ ಬಸವ ಬಳಗ ಜಿಲ್ಲಾಧ್ಯಕ್ಷರಾದ ಡಾ. ಸಂಜೀವಕುಮಾರ ಜುಮ್ಮಾ ಹೇಳಿದರು.
ವಡಗಾಂವ ಗ್ರಾಮದಲ್ಲಿ ಶನಿವಾರ ಡಾ.ಬಸವಲಿಂಗ ಪಟ್ಟಿದೇವರ ಅಮೃತ ಮಹೋತ್ಸವ ಪ್ರಯುಕ್ತ ಬಸವ ಜ್ಯೋತಿ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.
ಭಾಲ್ಕಿ ಹಿರೇಮಠದ ಪೂಜ್ಯಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಜನ್ಮದಿನದ ಪ್ರಯುಕ್ತವಾಗಿ ಜನ್ಮಸ್ಥಳವಾದ ತೆಲಂಗಾಣ ನಾಗೂರ ಗ್ರಾಮದಿಂದ ವಚನ ಜ್ಯೋತಿ ಯಾತ್ರೆ ಪ್ರಾರಂಭಿಸಿ ವಡಗಾಂವ ಹಾಗೂ ಒಟ್ಟು 75 ಗ್ರಾಮಗಳಿಗೆ ಯಾತ್ರೆ ತೆರಳಿ ಬಸವ ಜ್ಯೋತಿಯನ್ನು ನೀಡಿ ಏಪ್ರಿಲ್ 22 ರಂದು ಭವ್ಯವಾದ ಕಾರ್ಯಕ್ರಮವನ್ನು ಭಾಲ್ಕಿ ಚೆನ್ನಬಸವಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಹಾಗಾಗಿ ಎಲ್ಲಾ ಬಸವಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಅವರು ವಿನಂತಿಸಿ ಕೊಂಡರು.
ಶಿವಕುಮಾರ ಹಿರೇಮಠ, ವೈಜಿನಾಥ ನಿಟ್ಟೂರೆ,
ವಡಗಾಂವ ಗ್ರಾಮದ ಪ್ರಮುಖರಾದ ಸಂಗಶೆಟ್ಟಿ ಖಾನಾಪುರೆ, ಹನುಮಂತ ನೇಳಗೆ, ಬಸವರಾಜ ಚಿಕ್ಕಲಿಂಗೆ, ರಮೇಶ ಚಿಕ್ಕಲಿಂಗೆ, ಪ್ರಕಾಶ ದೇಶಮುಖ್, ಸಿದ್ದಯ್ಯ ಸ್ವಾಮಿ, ಶಾಮರಾವ ಸಿಂಪಿ, ಪ್ರಕಾಶ ಜೀರಿಗೆ, ಉಮೇಶ ಲಕ್ಕಾ, ಮಹಾದೇವ ಖಳ್ಳೂರೆ, ಸಿದ್ದಪ್ಪ ಹಡಪದ, ಪ್ರಕಾಶ ಉತ್ಕಾರ, ನವೀಲಕುಮಾರ ಉತ್ಕಾರ್, ಜೈಶ್ರೀ ಖಾನಾಪುರೆ, ಆಶಾ ಜೀರಿಗೆ, ಉಮಾ ಕಾಡೋದೆ, ಮಹಾದೇವಿ ಖಳ್ಳೂರೆ, ಶೈಲಾಶ್ರೀ ಖಳ್ಳೂರೆ ಬಸವ ಜ್ಯೋತಿ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದರು.
