March 1, 2026

ಔರಾದ್ : ಮನು ಕುಲದ ಉದ್ಧಾರಕ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂದು ಸಾರಿದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರರ ತತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನಗರಾಧ್ಯಕ್ಷ ಅಮರಸ್ವಾಮಿ ಸ್ಥಾವರಮಠ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವದಲ್ಲಿ ಮಾತನಾಡಿದ ಅವರು ಜಗತ್ತಿನಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಬೋಧಿಸಿದ ಏಕೈಕ ಧರ್ಮ ಅದು ಆದಿ ಜಗದ್ಗುರು ರೇಣುಕಾಚಾರ್ಯರು ಸ್ಥಾಪಿತವಾದ ವೀರಶೈವ ಧರ್ಮ ಹದಿನೇಳು ಮಠಗಳನ್ನು ಕಟ್ಟಿ ಭಾವೈಕ್ಯತೆಗೆ ಅಡಿಪಾಯ ಹಾಕಿದರು ಅವರು ಜಗತ್ಕಲ್ಯಾಣಕ್ಕಾಗಿ ಮತ್ತು ಜನಕಲ್ಯಾಣಕ್ಕಾಗಿ ಪರಶಿವನ ಆದೇಶಾನುಸಾರ ಕೊಲನುಪಾಕ ಕ್ಷೇತ್ರದ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿದ ದಿನವೇ ಪಾಲ್ಗುಣ ಶುದ್ದತ್ರಯೋದಶಿ, ಕೆಲವು ಮಠಾಧೀಶರು ರೇಣುಕಾಚಾರ್ಯರ ಇತಿಹಾಸ ಮರೆಮಾಚಿ ವ್ಯಕ್ತಿ ಪ್ರಧಾನವಾಗಿ ನಡೆದುಕೊಳ್ಳುತ್ತಿದ್ದಾರೆ ಎಲ್ಲವೂ ಮಠಗಳು ಸಹ ರೇಣುಕಾಚಾರ್ಯರು ಸ್ಥಾಪಿಸಿದ ಪಂಚಪೀಠಗಳ ಶಾಖಾ ಮಠಗಳು ಈ ಸತ್ಯವನ್ನು ನಾವು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ ತಾಲೂಕು ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸುವ ಕಾರ್ಯ ಹಾಗೂ ರೇಣುಕಾಚಾರ್ಯರ ಇತಿಹಾಸ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜಯಂತಿ ಯುಗಮಾನೋತ್ಸವ ಆಚರಣೆ ಮಾಡೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ ಸಂಗಯ್ಯ ಸ್ವಾಮಿ, ಗುಂಡಯ್ಯ ಸ್ವಾಮಿ, ಬಸವರಾಜ ಸ್ವಾಮಿ, ಕಲ್ಯಾಣರಾವ ದೇಶಮುಖ, ರೇವಣಪ್ಪ ಜ್ಯಾಂತೆ, ಡಾ.ಧನರಾಜ ರಾಗಾ, ಗೌರವ ದೇಶಮುಖ, ಶರಣಪ್ಪ ಪಾಟೀಲ, ರಾಮಣ್ಣ ವಡಿಯಾರ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ದ್ಯಾಡೆ, ಸಂದೀಪ ಪಾಟೀಲ, ಶ್ರೀಕಾಂತ ಚಿದ್ರೆ, ಸದಾನಂದ ಸ್ವಾಮಿ, ವಿಜಯಕುಮಾರ ಸ್ವಾಮಿ, ವಿವೇಕ ನಿರ್ಮಳೆ, ಮಹೇಶ ಸ್ವಾಮಿ, ಕಾರ್ತಿಕ ಸ್ವಾಮಿ, ಬಸವ ಚೌಕಂಪಳ್ಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771