ಔರಾದ:-ಒಂದೇ ದಿನ ಮೂರು ಗ್ರಾಮಗಳಲ್ಲಿ ಹೋಲದಲ್ಲಿ ಕೃಷಿ ಕೆಲಸ ಮಾಡುತ್ತಿರುವ ನಾಲ್ವರ ಮೇಲೆ ತೋಳ ದಾಳಿ ಮಾಡಿ ಅಪಾರ ಹಾನಿ ಮಾಡಿದೆ.
ತಾಲೂಕಿನ ಆಲೂರ್(ಬಿ) ಗ್ರಾಮದ ರುಕ್ಮಿಣ ಬಾಯಿ ವಿಠ್ಠಲ ಮೇತ್ರೆ, ಜೀರ್ಗಾ(ಬಿ) ಗ್ರಾಮದ ಮಂಗಲಾ ಶರಣಯ್ಯ ಸ್ವಾಮಿ, ರೇವಪ್ಪ ಪ್ರಭು ಬಂಬೂಳಗೆ(೧೫) , ಜೋಜನಾ ಗ್ರಾಮದ ಲಾಲಮ್ಮ ತುಕಾರಾಮ್ ಕಾಂಬ್ಲೆ ,ಗಾಯಗೊಂಡ ದುರ್ದೈವಿಗಳಾಗಿದ್ದಾರೆ.
ತಾಲೂಕಿನ ಆಲೂರ್(ಬಿ) ಗ್ರಾಮದ ರುಕ್ಮಿಣ ಬಾಯಿ ವಿಠ್ಠಲ ಮೇತ್ರೆ, ಜೋಜನಾ ಗ್ರಾಮದ ಲಾಲಮ್ಮ ತುಕಾರಾಮ್ ಕಾಂಬ್ಲೆ ಹೋಲದಲ್ಲಿ ಕೆಲಸ ಮಾಡುತ್ತಿರುವಾಗ ಹಿಂದಿನಿAದ ದಾಲಿ ಮಾಡಿದ ತೋಳ ತಲೆಗೆ, ಕಿವಿಗೆ, ಬೆನ್ನಿಗೆ, ಸೋಂಟಕ್ಕೆ ದಾಳಿ ಮಾಡಿದೆ. ಜೀರ್ಗಾ(ಬಿ) ಗ್ರಾಮದ ಮಂಗಲಾ ಅವರು ಹೋಲದಲ್ಲಿ ಕೆಲಸ ಮಾಡಿ ಮನೆಗೆ ವಾಪಸ್ ಬರುತ್ತಿರುವಾಗ ಹಿಂದಿನಿAದ ತೋಳ ದಾಳಿ ಮಾಡಿದ್ದಾಗ ರೈತ ಮಹಿಳೆ ಏಕಾಎಕಿ ಚೀರಾಟಮಾಡಿದಾಗ ಮುಂದೆ ಇದ್ದ ಅವರ ಗಂಡ ಶರಣಯ್ಯ ಸ್ವಾಮಿ ಅವರು ತೋಳದೊಂದಿಗೆ ಸೆಣಸಾಟ ಮಾಡಿ ಹೆಂಡತಿ ಪ್ರಾಣ ಕಾಪಾಡಿದ್ದಾರೆ.

ಸಂಜೆ ಹೋತ್ತಿಗೆ ಜೀರ್ಗಾ(ಬಿ) ಗ್ರಾಮದ ರೇವಪ್ಪ ಪ್ರಭು ಬಂಬೂಳಗೆ(೧೫) ಇವರ ಮೇಲೆಯೂ ಹೋಲದಿಂದ ಬರುವಾಗ ತೋಳ ದಾಳಿ ಮಾಡಿ ಗಾಯಾಗೊಳಿಸಿದೆ.
ನಾಲ್ಕು ಜನರಿಗೂ ಅತ್ಯಂತ ರಕ್ತಸ್ರಾವ ಆಗಿರುವ ಕಾರಣ ಎಲ್ಲರಿಗೂ ಹೆಚ್ಚಿನ ಚಿಕಿತ್ಸೆ ಬೀದರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸಂತಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸುತ್ತಿದ್ದಾರೆ. ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
