
ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕೋಣಿ ಚೌಧರಿ ಗ್ರಾಮದಲ್ಲಿ ಅದ್ದೂರಿಯಾಗಿ ಹೋಳಾ ಹಬ್ಬವನ್ನು ದನಕರುಗಳಿಗೆ ಮೆರವಣಿಗೆ ಮೂಲಕ ಊರಿನ ಜನರು ಕುಣಿದು ಕುಪ್ಪಳಿಸಿದೂರು
ಔರಾದ್ ತಾಲೂಕನಾದ್ಯಂತ ಸಂಭ್ರಮದ ಹೋಳಾ ಹಬ್ಬ ಆಚರಣೆ ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ ಕೃಷಿಕರು ಆವುಗಳನ್ನು ಪೂಜಿಸಿ ಗೌರವಿಸುತ್ತಾರೆ ರಾಸುಗಳಿಗೆ ಗೌರವಿಸುವ ಸಲುವಾಗಿಯೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋಳಾ ಹಬ್ಬ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕಂಡು ಬರುವ ಈ ಆಚರಣೆ ಜಿಲ್ಲೆಯ ಔರಾದ ಹಾಗೂ ಕಮಲನಗರ ತಾಲೂಕಿನ ರೈತರಿಗೂ ಇದು ಅಚ್ಚುಮೆಚ್ಚಿನ ಹಬ್ಬ. ಮಾಹಾರಾಷ್ಟ್ರದಲ್ಲಿ ಈ ಹಬ್ಬಕ್ಕೆ ಪೋಳಾ (ಎತ್ತು) ಎಂದು ಕರೆಯುತ್ತಾರೆ.
ನಮ್ಮಲ್ಲಿ ಹೋಳಾ ಎಂದು ಕರೆಯಲಾಗುತ್ತದೆ ಇದೇ ರೀತಿಯ ಹಬ್ಬವನ್ನು ರಾಜ್ಯದ ಬೇರೆ ಬೇರೆ ಕಡೆ ಹಾಗೂ ಜಿಲ್ಲೆಯ ಕೆಲ ಕಡೆ ಕಾರಹುಣ್ಣಿಮೆ ಎಂದು ಆಚರಿಸುತ್ತಾರೆ ಅದೂ ಹುಣ್ಣಿಮೆಗೆ ಆಚರಿಸಿದರೆ ಹೋಳಾ ಆಮವಾಸೆ ದಿನ ಆಚರಿಸುತ್ತಾರೆ ಎತ್ತುಗಳು ಕೃಷಿಯ ಅವಿಭಾಜ್ಯ ಅಂಗ ಅವು ಮಳೆ ಗಾಳಿ.ಬಿಸಿಲು ಲೆಕ್ಕಿಸದೆ ರೈತನ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿವೆ. ಈ ಮೂಲಕ ಪ್ರಾಣಿಗಳಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಹೋಳಾ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ ಹಬ್ಬದ ಹಿಂದಿನ ದಿನ ರೈತರು ಎತ್ತುಗಳ ಹೆಗಲಿಗೆ ಅರಸಿಣ ಮತ್ತು ಎಣ್ಣೆಯಿಂದ ಮಾಲಿಶ್ ಮಾಡುತ್ತಾರೆ ಹಬ್ಬದ ದಿನ ಬೆಳಿಗ್ಗೆ ಸ್ನಾನ ಮಾಡಿಸಿ ಕೊಂಬುಗಳಿಗೆ ಬಣ್ಣ ಹಚ್ಚುತ್ತಾರೆ. ಕೊರಳಲ್ಲಿ ಕವಡೆ (ಮಾತಟಿ) ಗೆಜ್ಜೆನಾದದ ಸರಮಾಲೆ.ಟೊಂಕಿಗೆ ಕರಿದಾರ.ಬೆನ್ನ ಮೇಲೆ ಬಣ್ಣದ ಶಾಲು ಹಣೆಗೆ ರಂಗು ರಂಗಿನ ಬಾಸಿಂಗ್ ತೊಡಿಸಿ ಸಿಂಗರಿಸುತ್ತಾರೆ. ಹೀಗೆ ಸಿಂಗಾರಗೊಂಡ ಊರಿನ ಎಲ್ಲರ ಎತ್ತು ಹಾಗೂ ಹೋರಿಗಳು ಒಂದೆಡೆ ಸೇರಿಸಲಾಗುತ್ತದೆ. ನಂತರ ಹನುಮಾನ್ ದೇವರ ದರ್ಶನ ಮಾಡಿ ದೇವಸ್ಥಾನಕ್ಕೆ ಐದು ಸುತ್ತು ಹಾಕಲಾಗುತ್ತದೆ. ರಾತ್ರಿ ಮಹಿಳೆಯರು ವಿಧಿವತ್ತಾಗಿ ಎತ್ತುಗಳಿಗೆ ಪೂಜಿಸಿ ಬೆಲ್ಲ ತುಪ್ಪದಿಂದ ಮಾಡಿದ ಹೊಳಿಗೆ ಕರ್ಚಕಾಯಿ ತಿನ್ನಿಸುತ್ತಾರೆ. ಹೀಗೆ ರೈತರು ಇಡೀ ದಿನ ಉಪವಾಸ ಉಳಿದು ರಾತ್ರಿ ಎತ್ತುಗಳಿಗೆ ನೈವೈದ್ಯ ತಿನ್ನಿಸಿದ ನಂತರವೇ ತಾವು ಊಟ ಮಾಡುವ ರೂಢಿ ಹಾಕಿಕೊಂಡಿದ್ದಾರೆ. ಸಂಜೆ ಹೊತ್ತು ನಡೆಯುವ ಎತ್ತುಗಳ ಮೆರವಣಿಗೆ ನೋಡಲು ಜನ ಮುಗಿ ಬೀಳುತ್ತಾರೆ. ಕೆಲ ಊರುಗಳಲ್ಲಿ ಅತ್ಯತ್ತಮವಾಗಿ ಸಿಂಗಾರಗೊಂಡ ಎತ್ತುಗಳಿಗೆ ಬಹುಮಾನ ಕೊಡುವ ಪದ್ಧತಿ ಇದೆ. ಇಂತಹ ಆಧುನಿಕ ಹಾಗೂ ಮೊಬೈಲ್ ಯುಗದಲ್ಲೂ ಹೋಳಾದಂತಹ ಹಬ್ಬ ತನ್ನ ವೈಶಿಷ್ಟ್ಯದಿಂದ ಜನಮನ ಸೆಳೆಯುತ್ತಿರುವುದು ಅದ್ಭುತವೇ ಸರಿ. ಈಗಲೂ ನಮಗೆ ಹೋಳಾ ಹಬ್ಬ ಬಂದರೆ ತುಂಬಾ ಖುಷಿ. ವರ್ಷವೀಡಿ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುವ ಎತ್ತುಗಳಿಗೆ ಪೂಜಿಸುವ ಬಹುದೊಡ್ಡ ಹಬ್ಬ ಈ ಹೋಳಾ ಹಬ್ಬವಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಭೀಮಣ್ಣ ಗಂದಿಗೆ, ವೈಜನಾಥ್ ಮುಗಟೆ,ತುಳಸಿರಾಮಾ ಮಲ್ಲಿಗೆ, ಸತ್ಯನಾರಾಯಣ ರಾಜಪುತ, ಪರಮೇಶ್ವರ್ ವಲ್ಲೇಪೂರ,ನಾಮದೇವ್ ಗುರುಜಿ,ಅಮ್ಮತ ವಲ್ಲೇಪೂರ,ಪರಮೇಶ್ವರ್ ಮೇತ್ರೆ, ಗ್ರಾಪಂ ಸದಸ್ಯ ಕರಬಸಪ್ಪಾ ಸೊರಾಳೆ, ಮಹೇಶ್ ಚಾಬೋಳೆ, ಮಾಜಿ ಸೈನಿಕ ಬಸವರಾಜ ಶಿಪೂಜೆ,ಶ್ರೀಧರ್ ರೆಡ್ಡಿ,ರೈತ ಈರಣ್ಣ ಚಾಬೋಳೆ,
ಶಶಿಕಾಂತ್, ಉಮಾಕಾಂತ ಮುಗಟೆ,ಹಾಗೂ ಊರಿನ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.