
ಕಮಲನಗರ:-ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಇಂದಿನ ಯುವ ಪೀಳಿಗೆಯ ಮನಮುಟ್ಟುವಂತೆ ಜಾಗ್ರತಿ ಮೂಡಿಸಿ ತಿಳಿಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಜಿಲ್ಲಾ ಜಿಲ್ಲಾ ಜನ ಜಾಗ್ರತಿ ಸದಸ್ಯ ಮಲ್ಲಪ್ಪ ಗೌಡ ಹೇಳಿದರು.
ಸೋಮವಾರ ಠಾಣಕುಶನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಏರ್ಪಡಿಸಿದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಮಕ್ಕಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು,
ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಮಹತ್ವದ ಕಾರ್ಯವಾಗಿದೆ. ಅವರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ತಂಬಾಕು ನಿಯಂತ್ರಣದ ವಿಚಾರದಲ್ಲಿ ಎಲ್ಲರು ಒಟ್ಟಾಗಿ ಪಣ ತೊಡಬೇಕಾಗಿದೆ. ತಂಬಾಕು ಸೇವನೆಯ ದುಶ್ಚಟಕ್ಕೆ ದಾಸರಾಗಿ ವಿಶ್ವದಲ್ಲಿ ಪ್ರತಿವರ್ಷ ಸುಮಾರು ಲಕ್ಷಕ್ಕೂ ಹೆಚ್ಚಿನ ಜನರು ಸಾಯುತ್ತಿದ್ದಾರೆ. ಯುವ ಪೀಳಿಗೆಯು ತಂಬಾಕಿನ ದುಶ್ಚಟಕ್ಕೆ ಬೀಳುವುದನ್ನು ತಡೆಯುವುದು ಒಂದು ಸವಾಲಾಗಿದ್ದರೆ, ಈಗಾಗಲೇ ಈ ದುಶ್ಚಟಕ್ಕೆ ಒಳಗಾದವರನ್ನು ಅದರಿಂದ ಹೊರತರುವುದು ಇನ್ನೂ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮಕ್ಕಳು ಇಂತಹ ಕೆಟ್ಟ ಚಟಗಳ ಮುಕ್ತಿಗಾಗಿ ಕೈ ಜೋಡಿಸಬೇಕು ಎಂದರು.
ಮುಖ್ಯಗುರು ಸಂಜುಕುಮಾರ್ ಮಾತನಾಡಿ,
ಹತ್ತು ಹಲವು ಕಾರಣಗಳಿಂದ ಧೂಮಪಾನದ ಚಟ ಅಂಟಿಸಿಕೊಂಡು ಅನೇಕರು ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಧೂಮಪಾನ ಹುಸಿ ಕಲ್ಪನೆಗಳು ಜನರಲ್ಲಿ ಮೂಡಿರುವುದು ದುರದೃಷ್ಟಕರ. ಬೀಡಿ, ಸಿಗರೇಟು, ಗುಟ್ಕಾ, ಜರ್ದಾ, ನಶ್ಯಾ, ಹುಕ್ಕಾ ಹೀಗೆ ಅನೇಕ ರೀತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಿ ಜೀವನ ಕಳೆದುಕೊಳ್ಳಬಾರದು. ಸ್ವಯಂಪ್ರೇರಿತವಾಗಿ ಧೂಮಪಾನ, ಮದ್ಯಪಾನ ವರ್ಜಿಸಲು ಬಯಸುವರಿಗೆ ಧರ್ಮಸ್ಥಳ ಸಂಸ್ಥೆ ಚಟದಿಂದ ಮುಕ್ತಿಗೊಳಿಸುವ ಸುವರ್ಣ ಅವಕಾಶಮಾಡಿಕೊಡುತ್ತಿದೆ ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುಖ್ಯಗುರು ಸಂಜು ಕುಮಾರ್ ಕದಂ, ಧನರಾಜ್, ರವಿ ವಲ್ಲಾಪುರೆ, ಸುನೀತಾ, ಅನಿತಾ, ಅಂಬಿಕಾ, ರೂಬಿನಾ, ಅಲೋಕ, ರಾಜಕುಮಾರ್ ಇದ್ದರು.ವಲಯ ಮೇಲ್ವಿಚಾರಕ ವಿಲಾಸ ಪೂಜಾರಿ ನಿರೂಪಣೆ ಮಾಡಿ ಸ್ವಾಗತಿಸಿದರು.