
ಔರಾದ್ : ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮದ್ಯವರ್ಜನ ಸಂಸ್ಥಾಪನಾ ಸಮಿತಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಅ.23 ರಂದು ನಡೆಯಲಿದೆ ಎಂದು ಮದ್ಯವರ್ಜನ ಸಂಸ್ಥಾಪನಾ ಸಮಿತಿ ತಾಲೂಕು ಅಧ್ಯಕ್ಷ ಅಶೋಕ ಶೆಂಬೆಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಹಣೇಗಾಂವ ಶ್ರೀ ಶಂಕರಲಿಂಗ ಶಿವಾಚಾರ್ಯರು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಶಾಸಕ ಪ್ರಭು ಚವ್ಹಾಣ ಉದ್ಘಾಟಿಸುವರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ನಟರಾಜ ಬಾದಾಮಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ, ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಾದಗಿ, ಕಲಬುರಗಿ ವಾಣಿಜ್ಯ ತೆರಿಗೆ ಅಧಿಕಾರಿ ಖಾಜಾ ಖಲೀಲ್ ಉಲ್ಲಾ, ಮಾಜಿ ಜಿಪಂ ಸದಸ್ಯ ವಸಂತ ಬಿರಾದಾರ, ಬಿಜೆಪಿ ತಾಲೂಕು ಅದ್ಯಕ್ಷ ರಾಮಶೆಟ್ಟಿ ಪನ್ನಾಳೆ, ಉದ್ಯಮಿ ರಾಮ ನರೋಟೆ, ಮಾರುತಿ ವಾಡೇಕರ, ಶ್ರೀನಿವಾಸ ಖೂಬಾ, ಅಶೋಕ ಅಲಮಾಜೆ, ಧನರಾಜ್ ಮುಸ್ತಾಪುರ, ಯಾದವರಾವ ಸಾಗರ ಭಾಗವಹಿಸಲಿದ್ದಾರೆ ಎಂದು ಶೆಂಬೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ