September 7, 2025

ಬೀದರ:-ಭಾರತೀಯ ಪರಂಪರೆಯಲ್ಲಿ ಶ್ರಾವಣ ಮಾಸ ವಿಶೆಷವಾದ ಮಹತ್ವವನ್ನು ಹೊಂದಿದೆ ಶ್ರಾವಣ ಮಾಸದಲ್ಲಿ ಎಲ್ಲರು ಭಕ್ತಿಯಲ್ಲಿ ಮಿಂದೇಳುವುದನ್ನು ನಾವು ಕಾಣುತ್ತೇವೆ ಈ ಮಾಸದಲ್ಲಿಯೆ ಇಷ್ಟೆಲ್ಲಾ ಧಾರ್ಮಿಕ ಆಚರಣೆ ಮತ್ತು ಗುರುಗಳಿಗೆ ಗೌರವ ಕುಡುವಂತದು ಕಾಣುವ ಶ್ರಾವಣ ಮಾಸ ಇದಾಗಿದೆ. ಹಿಂದೂ ಧರ್ಮದ ಪರಂಪರೆ ತತ್ವಗಳು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ.ಅಂತಹ ಪರಂಪರೆಯಾದ ಈ ಪವಿತ್ರ ಶ್ರಾವಣ ಮಾಸದಲ್ಲಿಯಾರು ಮನ ಪೂರ್ವಕವಾಗಿ ತಮ್ಮ ಸಂಕಲ್ಪ ಈಡೇರಿಕೆಗೆ ಶ್ರೀ ರುದ್ರಾಭಿಷೇಕ ಪೂಜೆ ಮಾಡುವುದು, ಈ ಮಾಸ ಆರಂಭವಾದಾಗಿನಿಂದ ಸಮಾಪ್ತಿ ಯ ವರೆಗೆ ಪ್ರತಿದಿನ ಬಿಲ್ವಪ್ರಿಯನಾದ ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ ಹಾಗೂ ಭಕ್ತಿಯಿಂದ ವಿಶೇಷ ವ್ರತ ಪೂಜಾದಿ ಕಾರ್ಯಗಳು ಹಾಗೂ ಉಪವಾಸ ವ್ರತ ಆಚರಿಸುವರೋ..ಮಹಾದೇವನು ಅವರ ಸಂಕಲ್ಪವನ್ನು ಶಿಘ್ರದಲಿ ಈಡೇರಿಸುವನು ಎನ್ನುವ ನಂಬಿಕೆ ಇದೆ. ಮಾನವನ ಜೀವನದ‌ ಪರಮಾನಂದ ಪ್ರಾಪ್ತಿ ಗಾಗಿ ಶರಣರ ಸಂತರ ಮಾಹತ್ಮರ ಪುರಾಣ ಪ್ರವಚನ ಪುಣ್ಯ ಕ್ಷೇತ್ರಗಳ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಅದಕ್ಕಾಗಿಯೇ ಶ್ರಾವಣ ಮಾಸ ಬಂದರೆ ಎಲ್ಲರ ಮನೆ ಸ್ವಚ್ಛ ಗೊಳಿಸಿಕೊಂಡು, ಮನ ಸ್ವಚ್ಛ ಗೊಳಿಸಿಕೊಳ್ಳಲು ಸಡಗರ ಸಂಭ್ರಮದ ಭಕ್ತಿ ವಾತಾವರಣ ಕಾಣುತ್ತೇವೆ. ಕೆಲ ಯುವಕರು ಶ್ವೇತ ವಸ್ರ್ತಗಳು ಧರಿಸುತ್ತಾರೆ, ತಿಂಗಳ ಪರಿಯಂತವಾಗಿ ಹಾಗು ಭಾರತದಲ್ಲಿ ಹೆಣ್ಣುಮಕ್ಕಳು ಲಕ್ಷ್ಮಿ ವ್ರತ, ಉಪವಾಸ ವ್ರತ, ಪ್ರತಿದಿನ ಮನದಾನಂದಕ್ಕಾಗಿ ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನಕೆ ಹೋಗಿ ಬರುವುದು, ಹೀಗೆ ಅನೇಕ ರೀತಿಯ ಭಕ್ತಿ ಯಲ್ಲಿ ತಲ್ಲೀನರಾಗಿರುವುದು ಕಾಣುತ್ತೇವೆ. ಅದಕ್ಕಾಗಿಯೆ ಜನರು ಶ್ರಾವಣ ಮಾಸದಲ್ಲಿ ಶಿವ ಧ್ಯಾನ, ಭಜನೆ ಕೀರ್ತನೆ, ಪುರಾಣ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಿ, ಪುಣ್ಯ ಕಾರ್ಯಗಳಲ್ಲಿ ಭಾಗವಹಿಸಿ ಭಕ್ತಿಯಿಂದ ತನುಮನದಿಂದ ನಿಸ್ವಾರ್ಥ ಸೇವೆ ಸಲ್ಲಿಸಿ ಪುಣ್ಯ ಫಲ ಪ್ರಾಪ್ತಿಪಡೆದುಕೊಂಡು ಜೀವನ ಧನ್ಯ ಗೊಳಿಸಿಕೊಳ್ಳುತ್ತಾರೆ. ಅದಲ್ಲದೇ ಇಂತಹ ಪರಿಶುದ್ಧ ಧಾರ್ಮಿಕ ನಂಬಿಕೆ ಭಕ್ತಿ ಭಾವದಿಂದ ನಡೆಯುವುದನ್ನು ಜಗತ್ತಿಗೆ ತನ್ನ ತತ್ವ, ಆದರ್ಶ, ಜ್ಞಾನ ದೀವಿಗೆ ಯಿಂದ ಬೆಳಕು ನೀಡಿದ ನಮ್ಮ ಭಾರತ ದಲ್ಲಿ ಮಾತ್ರ ಕಾಣಲು ಸಾಧ್ಯ.ಬಸವಾದಿ ಶರಣರ ನುಡಿಯಾದ ಕೂಡಲಸಂಗನ ಪೂಜಿಸಿದ ಫಲ ನಿಮ್ಮದಯ್ಯ ಎನ್ನುವ ವಚನದಂತೆ, ಶ್ರಾವಣ ಮಾಸದಲ್ಲಿ ನಾವೆಲ್ಲರೂ ಭಕ್ತಿಯಿಂದ ಗುರುವಿನ ಧ್ಯಾನಮಾಡಿ ಶ್ರೀ ಗುರು ಭದ್ರೆಶ್ವರ ಕೃಪೆಗೆ ಪಾತ್ರರಾಗೋಣ.

ಶಾಂತಕುಮಾರ್ ಸ್ವಾಮಿ
ಪೀಠಾಧಿಪತಿಗಳು
ಶ್ರೀಗುರು ಭದ್ರೇಶ್ವರ ಸಂಸ್ಥಾನ ಬಾವಗಿ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771