
ಕಮಲನಗರ:- ದಾಬಕಾ ಹೋಬಳಿ ಕೇಂದ್ರದ ಸುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕೆಲವೆಡೆ ಮನೆಗಳು ಕುಸಿದ ವರದಿಗಳಾಗಿವೆ. ಭಾನುವಾರ ರಾತ್ರಿ ಧಾರಾಕಾರ ಸುರಿದ ಮಳೆಯಿಂದಾಗಿ ಬಹುತೇಕ ರೈತರ ಜಮೀನುಗಳು ಕೆರೆ ಯಂತಾಗಿದ್ದು, ತಾಲೂಕಿನ ಭವಾನಿ ಬಿಜಲಗಾಂವ ಗ್ರಾಮದಲ್ಲಿ ಮನೆ ಕುಸಿದಿದೆ. ಭಾರಿ ಮಳೆಯಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಮೇಲೆ ನೀರು ಹರಿದ ಪರಿಣಾಮ ಬಸ್ಸುಸಂಚಾರ ಸ್ಥಗಿತಕೊಂಡಿದೆ,ರಸ್ತೆಗಳು ಹಾಳಾಗಿ, ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಅತಿವೃಷ್ಟಿಗೆ ನಲುಗಿದ ಅನ್ನದಾತ: ತಾಲೂಕಿನಲ್ಲಿ ಬಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಫಲ ಕೊಡಬೇಕಾದ ಬೆಳೆ ಕೊಳೆತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆಗಳು ವಿಪರೀತ ಮಳೆಯಿಂದ ಕೊಳೆತು ಹೋಗಿವೆ.
ಮುಂಗಾರು ಮಳೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ರೈತರು ಒಂದಿಷ್ಟು ಭರವಸೆ ಇಟ್ಟುಕೊಂಡ ಹೆಸರು ಮತ್ತು ಉದ್ದಿಗೊಸಹಮಳೆಯಿಂದತೀವ್ರ ಸಮಸ್ಯೆ ಎದುರಿಸುವಂತಾಗಿದೆ. ತಾಲೂಕಿನಾದ್ಯಂತ ನದಿ ಕರೆಗಳ ಹಳ್ಳಗಳ ಸುತ್ತಮುತ್ತಲಿರುವ ಬೆಳೆಗಳನ್ನು ನೀರು ಪಾಲಾಗಿವೆ. ಧಾರಾಕಾರ ಮಳೆಯಾಗಿರುವ ಹಿನ್ನಲೆ ರೈತರು ಸಂಕಷ್ಟ ಎದುರಿಸುತ್ತಿದ್ದು, ತುರ್ತಾಗಿ ಅತಿವೃಷ್ಟಿ ಪ್ಯಾಕೇಜ್ ಘೋಷಿಸುವಂತೆ ಹಾಗೂ ಪರಿಹಾರ ಒದಗಿಸುವಂತೆ ತಾಲೂಕಿನ ಅನ್ನದಾತರು ಆಗ್ರಹಿಸುತ್ತಿದ್ದಾರೆ”
“ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ದಾಬಕಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಂದಿ ಬೀಜಗಾವ್ ಗ್ರಾಮದಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಿಂದ ಸುಮಾರು ಹದಿಮೂರು ಎಮ್ಮೆಗಳು ಎರಡು ಎತ್ತುಗಳು ಒಂದು ಆಕಳು ಹಾಗೂ ಕರು ನೀರಿನ ರಭಸಕ್ಕೆ ನಿರುಪಾಲಾಗಿವೆ. ನಂದಿಬಿಜಲಗಾಂವ ಗ್ರಾಮದ ರೈತರಾದ ವಿದ್ವಾನ್ ಬಿರಾದರ್ ೨ ಎಮ್ಮೆಗಳು, ರಾಜಕುಮಾರ ಅಮದಾಪೂರೆ ೩ ಎಮ್ಮೆಗಳು, ನಾರಾಯಣ ಅಮದಾಪೂರೆ ೪ಎಮ್ಮೆಗಳು, ವಿಜಯಕುಮಾರ ಅಮದಾಪೂರೆ ೨ ಎಮ್ಮೆ, ೨ ಎತ್ತು, ೧ಆಕಳು,೧ಕರು, ಗಣಪತಿ ಕೇಂದ್ರೆ ಅವರು ೨ ಎರಡು ಎಮ್ಮೆಗಳು, ಹಾಗೂ ದನದ ಸೆಟ್ ಹೊಡೆದಿರತಕ್ಕಂತ ನಿರುಪಾಲಾಗಿದೆ ಹಳ್ಳದ ಸುತ್ತಮುತ್ತಲಿರುವ ಬೆಳೆಗಳು ಸಂಪೂರ್ಣ ಜಲಾವೃತ್ತಗೊಂಡುವೆ.
ಸ್ಥಳಕ್ಕೆ ಸಿಇಒ ದೀಲಿಪ ,ಕಮಲನಗರ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ ಕೃಷಿ ಅಧಿಕಾರಿ ಆನಂದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ದಾಪಕಾ ವಲಯದಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಿಂದ ನಂದಿಬಿಜಲಗಾಂವ ಗ್ರಾಮದ 20ಕ್ಕಿಂತ ಹೆಚ್ಚು ಜಾನುವಾರುಗಳು ಮಳೆಯಿಂದ ನಿರುಪಾಲಾಗುವೆ.ರೈತರು ಬಿತ್ತನೆ ಕೈಗೊಂಡಿರುವ ಸೋಯಾ ಬಿನ್, ಉದ್ದು, ಹೆಸರು, ತೊಗರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಕಂಗಾಲಾದ್ದಾರೆ.
ತಾಲೂಕಿನಾದ್ಯಂತ ನದಿ ಕರೆಗಳ ಹಳ್ಳಗಳ ಸುತ್ತಮುತ್ತಲಿರುವ ಬೆಳೆಗಳನ್ನು ನೀರು ಪಾಲಾಗಿವೆ. ಧಾರಾಕಾರ ಮಳೆಯಾಗಿರುವ ಹಿನ್ನಲೆ ರೈತರು ಸಂಕಷ್ಟ ಎದುರಿಸುತ್ತಿದ್ದು, ತುರ್ತಾಗಿ ಅತಿವೃಷ್ಟಿ ಪ್ಯಾಕೇಜ್ ಘೋಷಿಸುವಂತೆ ಹಾಗೂ ಪರಿಹಾರ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.
ದಿನೇಶ್ ಪಾಟೀಲ. ಗ್ರಾಪಂ ಸದಸ್ಯ ನಂದಿಬಿಜಲಗಾಂವ.