
ಔರಾದ:-ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ತಾಲೂಕಿನ ಪತ್ರಕರ್ತರಿಗೆ ಸನ್ಮಾನ
ಕಾರ್ಯಕ್ರಮ ಉದ್ಘಾಟನೆಯನ್ನು ಗ್ರೇಡ್ 2 ತಹಶೀಲ್ದಾರ್ ಸಂಗಯ್ಯ ಸ್ವಾಮಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತರು ಸಮಾಜದ ಏಳಿಗೆಗೆ ಶ್ರಮಿಸುವ ವ್ಯಕ್ತಿಯಾಗಿ ಕೆಲಸವನ್ನು ನಿರ್ವಹಿಸುತ್ತಾರೆ ಇವರು ಮಾಡುವ ನೈಜ ಸುದ್ದಿಗಳು ಜನರ, ಅಧಿಕಾರಿಗಳ ಕಣ್ಣನ್ನು ತೆರೆಸುವ ಕೆಲಸವನ್ನು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸ ನೀಡಿರುವ ಓಂ ಪ್ರಕಾಶ್ ದಡ್ಡೆರವರು ಮಾತನಾಡಿ, ಸಮಾಜದಲ್ಲಿ ಅನೇಕ ಕೆಟ್ಟ ಕೆಲಸವನ್ನು ನಡೆಯುತ್ತ ಇರುವ ಸಮಯದಲ್ಲಿ ಶಿವನ ಮೂರನೇ ಕಣ್ಣನ್ನು ತೆರೆದು ಸಮಾಜವನ್ನು ರಕ್ಷಿಸುವ ಕೆಲಸದ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ, ಅದೇ ರೀತಿ ಸಮಾಜವನ್ನು ಸರಿದಾರಿ ತರುವುದರಲ್ಲಿ ಪತ್ರಕರ್ತರು ಒಬ್ಬರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ವೇದಮೂರ್ತಿ ನವೀನ ಶಾಸ್ತ್ರಿಗಳು
ಪತ್ರಿಕಾರಂಗ ನಾಲ್ಕನೇ ಅಂಗವಾಗಿದ್ದು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತಪ್ಪು ಮಾಡಿದಾಗ ತಿದ್ದುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ತಾಲೂಕಿನ ಹಿರಿಯ ಪತ್ರಕರ್ತ ಅನೀಲಕುಮಾರ ದೇಶಮುಖ ಮಾತನಾಡಿ ದೃಶ್ಯ ಮಾಧ್ಯಮಗಳ ವೈಭವೀಕರಣದ ಸುದ್ದಿ ಪ್ರಚಾರ, ಸೋಶಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ಗಳ ಹಾವಳಿಯ ಮಧ್ಯೆ ನಾಡಿನ ಬಹಳಷ್ಟು ಮುದ್ರಣ ಮಾಧ್ಯಮದ ಪತ್ರಿಕೆಗಳು ತಮ್ಮ ಪತ್ರಿಕಾ ಧರ್ಮವನ್ನು ಪಾಲಿಸುವುದರ ಜೊತೆಗೆ ಓದುಗರಿಗೆ ಸತ್ಯ, ವಸ್ತುನಿಷ್ಠ ವರದಿ ಮತ್ತು ಲೇಖನಗಳನ್ನು ನೀಡುವ ಮೂಲಕ ನಂಬಿಕೆ ವಿಶ್ವಾಸ ಉಳಿಸಿಕೊಂಡಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಪತ್ರಕರ್ತರಾದ ಶರಣಪ್ಪಾ ಚಿಟ್ಮೆ, ಲಿಂಗಾಯತ ಸಮಾಜ ಯುವ ಸಂಘ ಅಧ್ಯಕ್ಷ ವಿರೇಶ ಅಲ್ಮಾಜೆ, ಕಿರಣ ಉಪ್ಪೆ, ಅಶೋಕ ರೆಡ್ಡಿ, ಕರವೇ ತಾಲೂಕಾಧ್ಯಕ್ಷ ಅನೀಲ ದೇವಕತ್ತೆ, ಬಸವರಾಜ ಶೆಟಕಾರ, ಬಸು ಚೌಕಂಪಳ್ಳೆ, ಭೀಮ,ರಾಹುಲ ಹಾಗೂ ಪ್ರಮುಖ ಪತ್ರಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.