
ಔರಾದ:-ಪತ್ರಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತಿರುವುದು ನೀಜಕ್ಕೂ ಶ್ಲಾಘನೀಯ ಕಾರ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪಿಠಾಧಿಪತಿ ಗುರುಬಸವ ಪಟ್ಟದೇವರು ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಮಿಡಿಯಾ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪತ್ರಕರ್ತರು ಪತ್ರಿಕೆ ಮೂಲಕ ಸಮಾಜಕ್ಕೆ ಸತ್ಯಾಂಶ ನೀಡುತ್ತಾರೆ ಅತಿ ರೋಚಕತೆಯಲ್ಲಿ ವಿಶ್ವಾಸಾರ್ಹತೆ ಕಳೆದು ಕೊಳ್ಳದೆ ಇರುವುದು ಪತ್ರಿಕೆಗಳಲ್ಲಿ ನೋಡುತ್ತವೆ ಎಂದರು.
ಎಲ್ಲ ರಂಗದ ಸಮೃದ್ಧಿಗೆ ಕಾರಣ ಪತ್ರಿಕೆಗಳು, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಪತ್ರಿಕೆಗಳು ಸನ್ನಧರಾಗಬೇಕು. ಪತ್ರಿಕಾ ರಂಗ ಕನ್ನಡಿ ಇದ್ದ ಹಾಗೆ ಅಂಕುಡೊಂಕು ತಿದ್ದಿ ಸನ್ಮಾರ್ಗಕ್ಕೆ ತರುವ ಕೆಲಸ ಪತ್ರಿಕೆಗಳು ಮಾಡುತ್ತಿವೆ ಎಂದರು.
ವಿಶೇಷ ಉಪನ್ಯಾಸ ಮಂಡಿಸಿದ ಸಾಹಿತಿ ಡಾ. ಶಿವಲಿಂಗ ಹೇಡೆ ಇಂದು ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಸರಿದಾರಿಗೆ ಸಾಗುವಲ್ಲಿ ಪತ್ರಿಕಾರಂಗದ ಕೊಡುಗೆ ಅಪಾರವಾಗಿದೆ ಪತ್ರಿಕೆಗಳು ಇಂದಿಗೂ ವಿಶ್ವಾಸರ್ಹ ಪಡೆದುಕೊಂಡಿದ್ದು ಯಾವ ವಿಶ್ವವಿದ್ಯಾಲಯ ನೀಡಿದ ಜ್ಞಾನ ಪತ್ರಿಕೆಗಳಿಂದ ಸಿಗುತ್ತದೆ ಹಿಗಾಗಿ ಪತ್ರಿಕೆಗಳು ಜನಸಾಮಾನ್ಯರ ವಿಶ್ವವಿದ್ಯಾಲಯ ಎನಿಸಿಕೊಂಡಿವೆ ಎಂದರು.
ದೇಶದ ಸ್ವತಂತ್ರದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ದೇಶಕ್ಕೆ ಸ್ವತಂತ್ರ ಸಿಗಲು ಪತ್ರಿಕಾ ರಂಗವೇ ಕಾರಣ ಅನೇಕ ಹೋರಾಟಗಾರರು ಪತ್ರಿಕೆಗಳ ಮೂಲಕವೇ ಸ್ವತಂತ್ರದ ಕಿಚ್ಚು ಹೊತ್ತಿಸಿ ಹೋರಾಟಕ್ಕೆ ಅಣಿಯಾಗಿಸಿದ್ದರು ಎಂದರು.
ಕನ್ನಡ ನಾಡಲ್ಲಿ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯಲು ಪತ್ರಿಕೆಗಳು ಕಾರಣ ಎಂದ ಅವರು ನಾಡಿನ ಸಾಹಿತಿಗಳು, ಕವಿಗಳು ಬೆಳಕಿಗೆ ಬಂದದ್ದು ಕೂಡ ಪತ್ರಿಕೆಗಳಿಂದಲೇ, ಸಾಹಿತ್ಯ ಸಂಸ್ಕೃತಿ, ಭಾಷೆ, ದೇಶ ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾದುದು. ಪತ್ರಕರ್ತರು ಧೀಮಂತರು ಎಂದು ಶ್ಲಾಘಿಸಿದರು.
ತಹಸೀಲ್ದಾರ ಮಹೇಶ ಪಾಟೀಲ, ತಾಪಂ ಇಒ ಶಿವಕುಮಾರ ಘಾಟೆ, ಪತ್ರಕರ್ತರಾದ ಅನೀಲಕುಮಾರ ದೇಶಮುಖ ಮಾತನಾಡಿ ದೇಶದಲ್ಲಿ ಪತ್ರಿಕೆಗಳು ಇಲ್ಲದಿದ್ದಲ್ಲಿ ಅಜಾರೂಕತೆ ಉಂಟಾಗುತ್ತಿತ್ತು ಅಧಿಕಾರಿಗಳನ್ನು ಕಣ್ಣು ತೆರೆಸುವ ಕೆಲಸ ಮಾಡುತ್ತಿರುವ ಪತ್ರಿಕೆಗಳ ಹಾಗೂ ಪತ್ರಕರ್ತರ ಕಾರ್ಯ ಶ್ಲಾಘನೀಯ. ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಮಾಡುತ್ತಿದೆ. ಸಾಮಾಜಿಕ ಸಮಸ್ಯೆಗಳನ್ನು ಅಧಿಕಾರಿಗಳ ಎದುರಿಗೆ ತರುವ ಕೆಲಸ ಪತ್ರಿಕೆ ವರದಿ ಮಾಡುತ್ತಿವೆ ಇದೇ ರೀತಿ ಸಮಾಜಕ್ಕೆ ಅನುಕೂಲವಾಗುವಂತೆ ಸೇವೆ ಸಲ್ಲಿಸಲಿ ಎಂದರು.
ಕಾರ್ಯಕಮದಲ್ಲಿ ಪಟ್ಟಣದಲ್ಲಿನ ಅಮರೇಶ್ವರ ಕೋ ಆಪರೇಟಿವ್ ಬ್ಯಾಂಕ ಹಾಗೂ ಲೋಕಮುದ್ರಾ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಪತ್ರಕರ್ತರನ್ನು ಸನ್ಮಾನಗೈಯಲಾಯಿತು.
ಮಧುಕರ್ ಎಲ್ಲೆನೋರ್ ನಿರೂಪಿಸಿ ವಂದಿಸಿದರು. ಅಮರ ಮುಕ್ತೆದಾರ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಕರ್ನಾಟಕ ಮಿಡಿಯಾ ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ಸಂತೋಷ ಚಾಂಡೇಶ್ವರೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಂಡರೀ ಆಡೆ, ಮಾರುತಿ ವಾಡೆಕರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಪತ್ರಕರ್ತರು ಸಾರ್ವಜನಿಕರು ಇದ್ದರು.
—