
ಬಸವಕಲ್ಯಾಣ : ತಾಲೂಕಿನ ಗೋಕುಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಎರಡನೆ ರವಿವಾರದಂದು ನಡೆದ ಶ್ರೀ ಬೀರಲಿಂಗೇಶ್ವರ ಹಾಗೂ ಮಾಳಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಹತ್ತಿರ ಇರುವ ಜನರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಈ ಜಾತ್ರಾ ಮಹೋತ್ಸವವು ಮೂರು ದಿನಗಳಕಾಲ ನಡೆಯಲಿದ್ದು,ಶನಿವಾರ ಇಡಿ ರಾತ್ರಿ ಗೋಕುಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಭಜನ ಮಂಡಳಿಯವರಿಂದ ಭಜನೆ ಕಾರ್ಯಕ್ರಮ. ರವಿವಾರ ಆಗಮಿಸಿದ ನೂರಾರು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ನೆರವರಿಸಲಾಗಿತ್ತು.
ಸೋಮವಾರದಂದು ಮುಂಜಾನೆ ಪಲ್ಲಕ್ಕಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು.ಈ ಪಲ್ಲಕಿ ಮೆರವಣಿಗೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಾದ ಕಿಟ್ಟಾ .ನಾರಾಯಣಪೂರವಾಡಿ.ಧನ್ನೂರಾ ಹಾಗೂ ಧನ್ನೂರಾ .ಕೆ ಮತ್ತು ತಾಂಡಾ ಸೆರಿದಂತೆ ಹಲವು ಜನನು ಭಾಗಿಯಾಗಿರುತಾರೆ. ಪಲ್ಲಕಿ ಮೆರವಣಿಗೆಯಲ್ಲಿ ಮನ್ನಾಳಿ ಪೂಜಾರಿಯಾದ ರಮೇಶ ಈರಕರ ಪೂಜಾರಿ ಅವರ ನೇತೃತ್ವದಲ್ಲಿ ಡೊಳ್ಳು ಕುಣಿತದೊಂದಿಗೆ ಭವ್ಯವಾಗಿ ಪಲ್ಲಕಿ ಮೇರವಣಿಗೆ ತೆಗೆಯಲಾಗುವುದು.
ಬೀರಗೊಂಡ ಮುತ್ಯಾ ಗೋಕುಳ :
ಈ ಜಾತ್ರಾ ಮಹೋತ್ಸವದಲ್ಲಿ ಬೀರಗೊಂಡ ಮುತ್ಯಾ ಗೋಕುಳ ಅವರು ಮಾತನಾಡಿ.ಜನರು ದೇವರ ಭಕ್ತಿ ಅನ್ನೋದು ಮನಸಿಂದ ಮಾಡಬೇಕು ಹೋರತು ಹೆಸರಿಗೆ ಅಲ್ಲ.ತಂದೆ ತಾಯಿಯ ಸೇವೆಯ ಜೋತೆ ನಾವೆಲ್ಲ ದೇವಸ್ಥಾನಕ್ಕು ನಮ್ಮ ಅಮೂಲ್ಯವಾದ ಸಮಯವನ್ನಿಟ್ಟು ದುಡಿದರೆ ಜೀವನದಲ್ಲಿ ಸೋಲು ಅನ್ನೋದು ಬರುವುದಿಲ್ಲ.ಮನುಷ್ಯ ಶೃದ್ಧೆ ಭಕ್ತಿಯಿಂದ ದೇವರಲ್ಲಿ ಭಕ್ತಿ ಮಾಡಿದರೆ ಆವಾಗ ದೇವರಿಗೆ ನಮ್ಮ ಕೂಗು ಕೇಳಿಸುತ್ತದೆ.
ದತ್ತು ಧರಿ:-ನಮ್ಮ ಊರಿಗೆ ಇದೊಂದು ಹೆಮ್ಮೆಯ ವಿಷಯವಾಗಿದ್ದು. ನಮ್ಮ ಗ್ರಾಮದ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳ ಜನ ಸಾಗರ ಕಂಡು ಮನಸಿಗೆ ತುಂಬಾ ಸಂತೋಷವಾಗುತಿದೆ. ಐತಿಹಾಸಿಕ ಸ್ಥಳಕ್ಕೆ ಇದೊಂದು ಇತಿಹಾಸಿಕದ ಜಾತ್ರಾ ಮಹೋತ್ಸವ.
ಗುಂಡಪ್ಪಾ ಮಾರ್ತಂಡ : ಈ ಜಾತ್ರೆಗೆ ಇಡಿ ಗ್ರಾಮದ ಜನರ ಒಳ್ಳೆ ಪ್ರೋತ್ಸಾಹವಿದ್ದು,ನಮಗೆ ಇನ್ನು ಮುಂದಿನ ವರ್ಷಕ್ಕೆ ಇದೆ ರಿತಿ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಮಾಡಲು ಉತ್ಸಾಹ ತಂದು ಕೊಡುತ್ತದೆ. ನಾವೆಲ್ಲ ಒಂದೆ ಎನ್ನೊ ಭಾವನೆ ಇಲ್ಲಿ ಮೂಡಿ ಬರುತ್ತಿದೆ. ಈ ಜಾತ್ರೆಯು ಬರಿ ಜಾತ್ರೆ ಅಷ್ಟೆ ಅಲ್ಲ ನಾವೆಲ್ಲ ಒಂದೆ ಎನ್ನುವ ಒಕ್ಕುಟ ಎಂಬುದು ತೋರಿಸಿ ಕೊಡುತ್ತದೆ.
ವಿಠ್ಠಲ ಬಾಲಕುಂದೆ : ಇಂತಹ ಕಾರ್ಯಕ್ರಮಗಳಿಂದ ಯುವಕರಿಗೆ ಕೆಲವು ದುಚ್ಛಟಗಳಿಂದ ದೂರಮಾಡಬಹುದು ಯಾಕೆಂದರೆ ಇಲ್ಲಿ ಮಾಡುವ ಸೆವೆ ಅನ್ನೊದು ದೇವರಿಗೆ ಮಾತ್ರ. ದೇವರ ಹತ್ರ ನಾವು ಎಷ್ಟೆ ದುಡಿದರು ಅದು ಕಡಿಮೆ.
ದಯಾನಂದ ಮಾರ್ತಂಡ : ನಾವು ಇಲ್ಲಿ ಪ್ರತಿವರ್ಷ ಮಾಡುವ ಈ ಜಾತ್ರಾ ಮಹೋತ್ಸವ ತುಂಬಾ ಅದ್ಧೂರಿಯಾಗಿ ನಡೆಯುತ್ತದೆ. ವರ್ಷದಲ್ಲಿ 3 ದಿನಗಳ ದೇವರ ಹತ್ರ ದುಡಿದರೆ ನಮ್ಮ ಜೀವನದಲ್ಲಿ ಬರುವ ಕಷ್ಟಗಳು ದೂರವಾಗುತ್ತವೆ. ಜೀವನದಲ್ಲಿ ಸಂತೋಷವನ್ನು ಹುಡುಕುವುದಾದರೆ ಅದು ದೇವಸ್ಥಾನದಲ್ಲಿ ಹುಡುಕಬೇಕು ಜೋತೆಗೆ ಇಲ್ಲಿ ಶೃದ್ಧೆ ಭಕ್ತಿಯಿಂದ ದುಡಿಯಬೇಕು.