September 7, 2025

ಔರಾದ:-ಸತತ ರಸ್ತೆ ಅಪಘಾತ, ಸಂಭವಿಸಬಹುದಾದ ಅಪರಾಧ ತಡೆ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರಲ್ಲಿ ಜಾಗೃತಿ ಮೂಢಿಸುವಲ್ಲಿ ಹೋಕ್ರಾಣಾ ಪೊಲೀಸರು ಯಶಸ್ವಿಯಾಗಿದ್ದು ಪೊಲೀಸರ ಕಾರ್ಯ ಸ್ಲಾಘನೀಯ ಎಂದು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಅನೀಲ ಬಿರಾದಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಚಿಮ್ಮೇಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 16 ಸೋಲಾರ ಸ್ಚಯಂ ಚಾಲೀತ ಸಿಸಿಟಿವಿ, ಮಾಳೆಗಾಂವ ಗ್ರಾಮದ ಹೇದ್ದಾರಿ ಮೇಲೆ ರಸ್ತೆ ಬ್ಯಾರೀಕೇಟ್ ಅಳವಡಿಕೆ ಕಾರ್ಯಕ್ರಮ ಜಂಟಿಯಾಗಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷಾ ಹಾಗೂ ಅಪರಾಧ ತಡೆಯುವಲ್ಲಿ ಮುನ್ನೆಚ್ಚರಿಕೆ ವಹಿಸುವಲ್ಲಿ ಹೋಕ್ರಾಣಾ ಪೊಲೀಸರು ಸತತ ಎರಡು ತಿಂಗಳಿಂದ ಮಾಡ್ತಿದ ಶ್ರಮಕ್ಕೆ ಫಲ ಸಿಕ್ಕಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಎಸ್ ಐ ಶೇಕ್ ಶಾ ಪಟೇಲ್ ಅವರು ಕಳೇದ ಆರು ತಿಂಗಳಿನಿಂದ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತಿಯವರಿಗೆ ಪ್ರಸ್ತಾಪಿಸಲಾಗಿತ್ತು ಮೊದಲ ಹಂತದಲ್ಲಿ ಚಿಮ್ಮೆಗಾಂವ್ ಗ್ರಾಮ ಪಂಚಾಯತಿಯವರು 16 ಸಿಸಿಟಿವಿ ಹಾಗೂ ರಸ್ತೆ ಬ್ಯಾರೀಕೇಟ್ ಹಾಕಿರುವುದು ಈ ಭಾಗದಲ್ಲಿ ಅಪರಾಣದ ತಡೆಯಾಗುವುದಲ್ಲದೆ ರಸ್ತೆ ಅಪಘಾತ ಕೂಡ ತಡೆಯಲಿದೆ. ಸಿಸಿಟಿವಿ ಇರುವುದರಿಂದ ಕಳ್ಳತನ ಕೃತ್ಯ ಮಾಡೊವರ ಸುಳಿವು ಸುಲಭವಾಗಿ ಸಿಗ್ತದೆ ಹೀಗಾಗಿ ಕಳ್ಳತನ ಮಾಡೊದಕ್ಕೂ ಮೊದಲು ಆರೋಪಿಗಳು ನೂರು ಸಾರಿ ಯೋಚನೆ ಮಾಡ್ತಾರೆ ಎಂದರು.

ಈ ವೇಳೆಯಲ್ಲಿ ಪಿಡಿಓ ತಾನಾಜಿ ಪಾಟೀಲ್, ಕಾರ್ಯದರ್ಶಿ ಸಂಜೀವಕುಮಾರ್ ಜಿರಗೆ, ಮುಖಂಡರಾದ ಮಾಧವ ಮಾಳಕರಿ, ಅಶೋಕ ದೇಶಮುಖ್, ಬಬನ ಚವ್ಹಾಣ, ಉಪಾಧ್ಯಕ್ಷ ವಸಂತ ರಾಠೋಡ, ಸುರೇಶ ಪವಾರ, ರಮೇಶ ಜಾಧವ, ಸುಮಿತ ದೇಶಮುಖ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771