September 7, 2025

ಶಹಾಪುರ; ನಗರದ ಜೀವೇಶ್ವರ ಕಲ್ಯಾಣ ಮಂಟಪದ ಎದುರು ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಮಂಗವೊAದಕ್ಕೆ ದೇವಿ ನಗರ ಬಡವಣೆಯ ಯುವಕರು ಅಂತ್ಯಕ್ರಿಯೆ ನಡೆಸಿದ್ದು, ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆ ನೈಜ ಸಾಕ್ಷಿಯಾಗಿದೆ.
ಕೆಲವೊಂದು ಸಮಯದಲ್ಲಿ ಮನುಷ್ಯರು ಸತ್ತರು ತಿರುಗಿ ನೋಡುವವರು ಇರೊದಿಲ್ಲ. ಶವಗಳಿಗೆ ವಿಧಿಪೂರ್ವಕ ಹಾಗಿರಲಿ, ಸರಿಯಾಗಿ ಮಣ್ಣು ಮಾಡೋರು ಇರಲ್ಲ. ಅದೆಷ್ಟೋ ಅನಾಥ ಶವವಗಳನ್ನು ಪೊಲೀಸರು, ನಗರಸಭೆಯವರು ಮಣ್ಣು ಮಾಡಿ ಬಿಡ್ತಾರೆ. ಇಂತÀದರಲ್ಲಿ ಅಪಘಾತದಲ್ಲಿ ಸತ್ತ ಮಂಗವೊAದಕ್ಕೆ ಯುವಕರೆಲ್ಲ ಕೂಡಿ ಹಣ ಸೇರಿ ಮಂಗನನ್ನು ಅಲಂಕರಿಸಿ, ಪೂಜಿಸಿದರು. ಮಂಗನ ಸಾವಿಗೆ ಜನರು ಮರುಗಿದರು. ಮಂಗ ದೇವರು, ಹನುಮ ಎಂದು ನಂಬಿಕೆ ಹಿನ್ನಲೇಯಲ್ಲಿ ಬಡವಣೆಯ ಯುವಕರೆಲ್ಲರೂ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜ, ಡಿಜೆ ಅಳವಡಿಸಿ ಆಂಜನೇಯ ಹಾಡುಗಳನ್ನು ಹಾಕಿ ಭರ್ಜರಿ ಮೆರವಣಿಗೆ ಮಾಡಿದರು. ಯುವಕರೆಲ್ಲರೂ ಮೃತಪಟ್ಟ ಕೋತಿಯ ಮೃತದೇಹವನ್ನು ಶಾಸ್ತೊçÃಕ್ತವಾಗಿ ಪೂಜೆ ಮಾಡಿ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.
ಪ್ರತಿನಿತ್ಯ ಬಡಾವಣೆಯಲ್ಲಿಯೇ ಓಡಾಡಿಕೊಂಡಿದ್ದ ಮಂಗ, ಜನರೊಂದಿಗೆ ಉತ್ತಮ ಒಡನಾಟ ಹೊಂದಿತ್ತು. ಈ ಹಿನ್ನಲೇ ಈ ಮಂಗನ ಸಾವಿನಿಂದ ಬಡಾವಣೆಯ ಜನರು ಮನನೊಂದಿದ್ದರು. ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಕೋತಿಯನ್ನು ಸಮೀಪದ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಲ್ಲಪ್ಪ ದೊಡ್ಮನಿ, ಮಾನಪ್ಪ ಗುಡೇನೂರ, ಬಸವರಾಜ ಕಣೆಕಲ್, ಗುರು ದೊಡ್ಮನಿ, ನಾಗಪ್ಪ ಹುಲಿಮನಿ ಸೇರಿದಂತೆ ಬಡವಣೆಯ ಯುವಕರು ಇದ್ದರು.
ಮಾನವೀಯ ಗುಣಕ್ಕೆ ಶ್ಲಾಘನೆ;
ಮೆರವಣಿಗೆ ವೇಳೆ ವಿಡಿಯೋವನ್ನು ಸೆರೆಹಿಡಿದ ಕೇಲ ಯುವಕರು ಸೊಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು ಸದ್ಯ ಫೋಟೊ ಮತ್ತು ವಿಡಿಯೋಕ್ಕೆ ಯುವಕರ ಮಾನವೀಯತೆ ಗುಣಕ್ಕೆ ನಗರದ ಜನತೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771