
ಔರಾದ:- ಬಿರುಗಾಳಿ ಮಳೆಗೆ ವಿದ್ಯುತ್ ಕಂಬಕ್ಕೆ ಮನೆಯ ಮೇಲಿನ ಪತ್ರಾಸ್ ಸಿಲುಕಿಕೊಂಡಿರುವುದು
ಔರಾದ್ ಪಟ್ಟಣದ ರಾಮನಗರ ಬಡಾವಣೆ ಯಲ್ಲಿ ಗುರುವಾರ ಮದ್ಯಾಹ್ನ ಸುರಿದ ಬಿರುಗಾಳಿ ಮಿಂಚು ಸಹಿತ ಮಳೆಗೆ ಮನೆಯ ಮೇಲಿನ ಪತ್ರಾಸ್ ಗಳು ಹಾರಿಹೋಗಿದ್ದು, ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾದ ಘಟನೆ ಜರುಗಿದೆ. ಮಳೆ ಹಾಗೂ ಗಾಳಿಯ ರಭಸಕ್ಕೆ ನಾಲ್ಕು ವಿದ್ಯುತ್ ಕಂಬ ಮತ್ತು ಮೂರನಾಲ್ಕು ಗಿಡಗಳು ಮುರಿದು ಬಿದ್ದಿವೆ. ಯಾವುದೇ ಸಾವು ನೋವಿನ ವರದಿ ಆಗಿಲ್ಲ.
ತಾಲ್ಲೂಕಿನೆಲ್ಲೆಡೆ ಮಧ್ಯಾಹ್ನ ದಿಂದ ಬಿರುಗಾಳಿ, ಗುಡುಗು ಮಿಂಚು ಸಹಿತ ಔಖಲಿ ಮಳೆ ಆಗಿರುವ ವರದಿ ಲಭ್ಯ ಆಗಿದೆ. ಯಾವುದೇ ಪ್ರಾಣ ಹಾನಿಯ ಬಗ್ಗೆ ವರದಿ ಕಂಡು ಬಂದಿಲ್ಲ.