
ಬೀದರ:-ಪುಟ್ಟ ಪರ್ತಿ ಬಾಬಾ ಎಜುಕೇಷನ್ ಸೊಸೈಟಿ ವತಿಯಿಂದ ಮುಂಬರುವ ಬುದ್ಧ ಪೂರ್ಣಿಮೆ ನಿಮಿತ್ಯ ಬುದ್ಧರ ಜೀವನ ಕುರಿತು ಒಂದು ಕವನ ಸಂಕಲನ ಹೊರ ತರಲು ನಿಶ್ಚಯಿಸಲಾಗಿದೆ. ಅದಕ್ಕಾಗಿ ಆಸಕ್ತ ಕವಿಗಳು “ಬುದ್ಧರ ಜೀವನ” ಕುರಿತು 16-20 ಸಾಲುಗಳ ಮಿತಿಯೊಳಗೆ ತಮ್ಮ ಕವನನ್ನು ಕಳಿಸಬೇಕಾಗಿ ವಿನಂತಿ. ಅತ್ಯುತ್ತಮವಾದ 3 ಕವಿತೆಗಳಿಗೆ ಪ್ರಥಮ(ರೂ.3000), ದ್ವಿತೀಯ(ರೂ.2000), ತೃತೀಯ ಬಹುಮಾನ (ರೂ.1000) ನೀಡಲಾಗುವುದು. ನಿರ್ಣಾಯಕರ ತೀರ್ಮಾನವೇ ಅಂತಿಮ. ಬಂದಿರುವ ಎಲ್ಲಾ ಕವಿತೆಗಳನ್ನು ಒಟ್ಟುಗೂಡಿಸಿ ಒಂದು ಕವನ ಸಂಕಲನ ಮಾಡಿ ಮುಂಬರುವ ಬುದ್ಧ ಪೂರ್ಣಿಮೆ (ಮೇ 12) ರಂದು ಬಿಡುಗಡೆ ಮಾಡಲಾಗುವುದು. ನಿಮ್ಮ ಕವಿತೆಗಳು ತಲುಪುವ ಕೊನೆಯ ದಿನಾಂಕ 20-4-2025. ಕವಿತೆಗಳನ್ನು ಕಡ್ಡಾಯವಾಗಿ ವಾಟ್ಸಪ್ಪ್ ನಲ್ಲಿ ಟೈಪ್ ಮಾಡಿ ಕಳಿಸಬೇಕು.ಕೈ ಬರಹದ ಕವಿತೆಗಳನ್ನು ಸ್ವೀಕರಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮತ್ತು ಕವಿತೆಗಳನ್ನು ಕಳುಹಿಸಲು ಕೆಳಗಿನ ವಾಟ್ಸ್ ಪ್ಪ ಸಂಖ್ಯೆಗೆ ಸಂಪರ್ಕಿಸಿ..
ಸುಜಾತ ಹೊಸಮನಿ : 9972363446
ಅಜಿತ.ಎನ್.ನೇಳಗಿ : 9972798972