
*ಅಂಬೇಡ್ಕರ ಆದರ್ಶ ಪಾಲಿಸಿದರೆ ಯಶಸ್ಸು ಖಂಡಿತ :ವಸಿಮ್ ಪಟೇಲ್*
ಇಂದು ಔರಾದ ಪಟ್ಟಣದ ರಾಮನಗರ ಬಡಾವಣೆಯಲ್ಲಿ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರರವರ ಜಯಂತೋತ್ಸವದ ಸಮಾರಂಭ ಉದ್ಘಾಟಿಸಿ ಧ್ವಜರೋಹಣ ನೆರೆವರೆಸಿ ಮಾತನಾಡಿದ ಅವರು ದೇಶಕ್ಕೆ ಸಮಾನತೆ ತತ್ವಬೋಧಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾನ್ ಮಾನವತಾವಾದಿ. ಅಹಿಂಸಾ ಪ್ರತಿಪಾದಕರು. ಸಂವಿಧಾನದಲ್ಲಿ ಅದು ಉಸಿರಾಗಿರುವಂತೆ ಕಾಪಿಟ್ಟವರು. ಜಾತಿ-ಮತ-ಧರ್ಮ ನಿರಪೇಕ್ಷ ಮನೋಧರ್ಮದ ಹೊಸ ಅರಿವಿನ ಬೀಜ ಬಿತ್ತಿದವರು. ಪ್ರಜಾಪ್ರಭುತ್ವದ ಅಪೂರ್ವ ಚೆಲುವು ಉಳಿಯಬೇಕಾದರೆ, ಅಂಬೇಡ್ಕರ್ ಅವರು ಪ್ರತಿಪಾದಿಸಿರುವ ಅಹಿಂಸಾ ಪಥ ಭ್ರಷ್ಟವಾಗದಂತೆ ನೋಡಿಕೊಳ್ಳಬೇಕು. ಇದನ್ನು ಸಾಮೂಹಿಕ ಜವಾಬ್ದಾರಿಯಿಂದ ನಾವೆಲ್ಲರೂ ಅಗತ್ಯವಾಗಿ ಕಾಪಾಡಿಕೊಳ್ಳಬೇಕಾಗಿದೆ ಅವರ ಆದರ್ಶಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಓಂಪ್ರಕಾಶ ದಡ್ಡೆ, ಶಿವು ಕಾಂಬಳೆ, ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ ಮುಖಂಡರಾದ ಭೀಮರಾವ್ ಕರಬಾಳೆ,ಬಾಬುರಾವ ಕಸ್ತೂರೆ,ರೋಹಿತ್ ಕಾಂಬಳೆ ಉಪಸ್ಥಿತರಿದ್ದರು