
ವರದಿ:-ಈರಣ್ಣ ಮೌರ್ಯ
ಶಹಾಪುರ; ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಸಹಕಾರ ಸಂಘ ಸ್ಥಾಪಿಸುವ ಕುರಿತು ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರ ನೇತೃತ್ವದಲ್ಲಿ ತಾಲೂಕ ಘಟಕದ ವತಿಯಿಂದ ಸಭೆ ಜರುಗಿತು.
ಸಭೆಯಲ್ಲಿ ಸಂಕೀನ್ ಅವರು ಮಾತನಾಡಿ ಪತ್ರಕರ್ತರಿಗೆ ಆರ್ಥಿಕವಾಗಿ ಸಬಲರಾಗಲು ನಮ್ಮದೇ ಸಹಕಾರ ಸಂಘವು ದಾರಿ ದೀಪವಾಗಲಿದೆ. ಹೆಚ್ಚಿಗೆ ಶೇರು ಹಾಕುವ ಮೂಲಕ ಸಂಘದ ಆರ್ಥಿಕ ಸಬಲತೆಗೆ ದೃಢವಾಗಿರೋಣ. ಪತ್ರಕರ್ತರು ಬೇಕಾದ ಸಂದರ್ಭದಲ್ಲಿ ಲೋನ್ ಪಡೆಯಬಹುದು. ಆರ್ಥಿಕವಾಗಿ ಬಲಗೊಳ್ಳಲು ಸಂಪೂರ್ಣವಾಗಿ ಪೂರಕವಾಗಲಿದೆ ಎಂದರು.
ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ದತ್ತಿ ಪ್ರಶಸ್ತಿ ಪುರಸ್ಕೃತರಾದ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಟಿ.ನಾಗೇಂದ್ರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಿಗಿ, ಶರಣು ಗದ್ದುಗೆ, ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಈರಣ್ಣ ಮೌರ್ಯ, ವಿಶಾಲ ದೋರನಹಳ್ಳಿ, ಅಮರೇಶ ಹಿರೇಮಠ, ಮಲ್ಲಯ್ಯ ಪೋಲಂಪಲ್ಲಿ, ರಾಘವೇಂದ್ರ ಹಾರಣಗೆರಿ, ಮಹೇಶ ಪತ್ತಾರ, ಬಸವರಾಜ ಕರೇಗಾರ, ನಾಗರಾಜ ಕೋಟೆ, ಗೌಡಪ್ಪ ಇದ್ದರು.