
ಬೀದರ:- ತಾಲೂಕಿನ ಸುಕ್ಷೇತ್ರ ಬಾವಗಿ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ಶೀ ಗುರು ಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ಶ್ರೀ ಗುರು ಭದ್ರೇಶ್ವರ ಅವರ ಪುರಾಣ ಕಾರ್ಯಕ್ರಮ ವನ್ನು ಗುರು ಭದ್ರೇಶ್ವರ ಸಂಸ್ಥಾನದ ವೇದಮೂರ್ತಿ ಭದ್ರಯ್ಯ ಸ್ವಾಮಿ, ಬಾಲಸಂಗಯ್ಯಾ ಸ್ವಾಮಿ, ಶಿವಕುಮಾರ್ ಸ್ವಾಮಿ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅನೇಕ ಮಹಾತ್ಮರ ಪುರಾಣ ಪ್ರವಚನ ಹಮ್ಮಿಕೊಂಡಿದ್ದೇವು, ಆದರೆ ಈ ಬಾರಿ ಭಕ್ತರ ಹಾಗೂ ಗ್ರಾಮಸ್ಥರ ಇಚ್ಛೆಯಂತೆ ಪವಾಡ ಪುರುಷ ಶೀ ಗುರು ಭದ್ರೇಶ್ವರ ರವರ ಜೀವನ ಚರಿತ್ರೆ ಕುರಿತು ಪುರಾಣವನ್ನು ಹಮ್ಮಿಕೊಳ್ಳಲಾಗಿದೆ,
ಈ ಪುರಾಣವು 11 ದಿನಗಳ ಕಾಲ ನಡೆಯಲಿದ್ದು ಹಾಗಾಗಿ ಸಕಲ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪುರಾಣ ಮತ್ತು ಜಾತ್ರಾ ಮಹೋತ್ಸವ ಯಶಸ್ವಿಯಾಗಿಸಬೇಕೆಂದು ವೇದಮೂರ್ತಿ ಭದ್ರಯ್ಯ ಸ್ವಾಮಿ ನುಡಿದರು.
ಪುರಾಣಿಕರಾದ ಪಂಡಿತ ವೇದ ಮೂರ್ತಿ ಬೆಟದಯ್ಯ ಶಾಸ್ತ್ರಿಗಳು ಶ್ರೀ ಗುರು ಭದ್ರೇಶ್ವರ ಜೀವನ ಚರಿತ್ರೆ ಕುರಿತು ಪುರಾಣವನ್ನು ಭಕ್ತರಿಗೆ ಉಣಬಡಿಸಿದರು. ಕಲಾವಿದರಾದ ಮಹಾದೇವ ಸ್ವಾಮಿ ಯಂಪಳ್ಳಿ, ತಬಲಾ ವಾದಕರಾದ ಶ್ರೀ ದಯಾನಂದ ಸ್ವಾಮಿ ಕಲ್ಲೂರ ರವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ
ಮುಖಂಡರಾದ ಚನ್ನಮಲ್ಲಪ್ಪ ಹಜ್ಜರಗಿ, ರಾಜಕುಮಾರ್ ಭದ್ರಣ್ಣ, ಲೋಕೇಶ ಕನಶೆಟ್ಟಿ, ನಾಗಶೆಟ್ಟಿ ಅಳ್ಳಿ, ಕಂಟಯ್ಯ ಸ್ವಾಮಿ ಗುಂಡಯ್ಯ ಸ್ವಾಮಿ, ಕಾಶಪ್ಪಾ ಪಕ್ಕಾ , ಶಿವಕುಮಾರ ರೇಶಟ್ಟಿ, ಮಡೆಪ್ಪ ಹಜರಗಿ ರಾಜಕುಮಾರ ಮಡಿವಾಳ ರಾಜಕುಮಾರ ಪಾಟೀಲ , ಬಸವರಾಜ ಖೌದಿ, ಪ್ರಭು ಹಜ್ಜರಗಿ, ಮಾರುತಿ ಹೂಗಾರ , ಶರಣಪ್ಪಾ ಮುದ್ದ ಸುನೀಲ ಚಿದ್ರಿ ,ನಾಗೇಶ್ ಕೊಳಾರ, ಅವಿನಾಶ್ ಭಾಲ್ಕೇ ರೆವಣಪ್ಪ ಮೆತ್ರಿ ಗುರು ಭದ್ರೇಶ್ವರ ಜಾತ್ರಾ ಮಹೋತ್ಸವದ ಸೇವಾ ಸಮಿತಿಯ ಸದಸ್ಯರು ಸೇರಿದಂತೆ ಹಲವಾರು ಭಕ್ತರು ಬಾವಗಿ ಗ್ರಾಮದ ಸಕಲ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಭದ್ರೇಶ್ವರ ಸಂಸ್ಥಾನದ ಶಾಂತಕುಮಾರ ಸ್ವಾಮಿ ನಿರೂಪಿಸಿದರೆ ಆನಂದ ಸ್ವಾಮಿ ವಂದಿಸಿದರು.