
ಶಹಾಪುರ; ರೈತರ ಸಮಸ್ಯೆ ಆಲಿಸಲು ಶೆಟ್ಟಿಗೇರ ಗ್ರಾಮಕ್ಕೆ ತೆರಳಿದ್ದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ಕಾಲುವೆಗೆ ಏ.೧೫ ರವರೆಗೆ ನೀರು ಹರಿಸುವಂತೆ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ಸಚಿವರಿಗೆ ಮನವಿ ಮಾಡಿದರು.
ಬಳಿಕ ಸಚಿವರು ಮಾತನಾಡಿ ಈ ಭಾಗದ ರೈತರಿಗೆ ಹೆಚ್ಚುವರಿ ನೀರು ಅಗತ್ಯವಿದೆ ಎಂದು ರೈತರು ಬೇಡಿಕೆ ಇಟ್ಟಿದ್ದು. ಈ ಬಗ್ಗೆ ತಿಮ್ಮಾಪುರ ಅವರ ಜೊತೆಯು ಸಹ ಚರ್ಚೆ ಮಾಡಲಾಗಿದೆ. ಸದ್ಯಕ್ಕೆ ನೀರಿನ ಲಭ್ಯತೆ ಕಷ್ಟ ಇದೆ ಎಂದು ಅವರು ತಿಳಿಸಿದ್ದು ರೈತರ ಹಿತದೃಷ್ಠಿಯಿಂದ ಕಾಲುವೆಗೆ ೩ ದಿನಗಳ ವರೆಗೆ ೩ ಟಿಎಂಸಿ ನೀರು ಬಿಡಲು ಮನವಿ ಮಾಡಲಾಗಿದೆ. ಅಧಿಕಾರಿಗಳ ಕೈಯಲ್ಲಿ ಏನೂ ಇಲ್ಲಾ. ಸರ್ಕಾರವೇ ನಿರ್ಧಾರ ಕೈಗೊಂಡು ನೀರು ಒದಗಿಸಬೇಕಿದೆ. ವರ್ಷದಿಂದ ವರ್ಷಕ್ಕೆ ಬಿಸಿಲಿನ ಪ್ರಮಾಣ ಹೆಚ್ಚುತ್ತಿದ್ದು, ರೈತರು ಸರ್ಕಾರ ನಿಗದಿ ಮಾಡಿ ಕಾಲುವೆಗೆ ನೀರು ಹರಿಸುವ ಸಮಯದೊಳಗೆ ಬೆಳೆ ಕೈಗೆ ಬರುವ ರೀತಿಯಲ್ಲಿ ನೀರು ಬಳಸಿಕೊಂಡು ಬೆಳೆ ಬೆಳೆಯಿರಿ ಎಂದು ಸಚಿವ ದರ್ಶನಾಪುರ ರೈತರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬೀಕ್ಷಣಗೌಡ ಕಾಡಂಗೇರ, ಬಸನಗೌಡ ಕಾಡಂಗೇರ ಸೇರಿದಂತೆ ರೈತರು ಇದ್ದರು.