
ಔರಾದ:-ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಇವರು ಪಟ್ಟಣದ ಎಂ ಎಸ್ ಗೋಪಾತೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಎರಡು ದಿನಗಳ ಹಿಂದೆ ನಡದೆ ಕಸದ ತೋಟ್ಟಿಯಲ್ಲಿ ಬಿಟ್ಟ ಹೋದ ಮಗುವಿನ ಕುರಿತು ಮಾಹಿತಿ ಪಡೆದರು ಮತ್ತು ಸಿ.ಸಿ.ಟಿವಿ, ದೃಶಗಳು ಮೂಬೈಲನಲ್ಲಿ ನೋಡಿದ್ದರು,
ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲು ಆಗಲು ಬಂದ ರೋಗಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಹಿಂತಿರುಗಿ ಹೋಗುವ ಸಮಯದಲ್ಲಿ ಹೊಟ್ಟೆ ನೋವು ಜಾಸ್ತಿಯಾಗಿ ಆಸ್ಪತ್ರೆಯ ಸೌಚ ಗ್ರಹಕ್ಕೆ ಹೋಗಿ ಮಗುವಿಗೆ ಜನ್ಮ ನೀಡಿ ಆ ಮಗುವನ್ನು ಪಾಲಕರ ಜೊತೆಗೂಡಿ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕಸದ ತೊಟ್ಟಿಯಲ್ಲಿ ಬಿಟ್ಟು ಹೋಗಿರುತ್ತಾರೆ,
ಆ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಗಮನಕ್ಕೆ ಬಂದಿರುವುದಿಲ್ಲ, ಮಾರನೆಯ ದಿನ ಬೆಳಗ್ಗೆ ಕಸದ ತೊಟ್ಟಿಯಲ್ಲಿ ಮಗು ಅಳುವನ್ನು ಮಗು ಅಳುವ ಶಬ್ದವನ್ನು ಕೇಳಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಮಗುವನ್ನು ಕಂಡು ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಿಳಿಸಿದರು ಅದಾದ ನಂತರ ಅವರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿಯನ್ನು ನೀಡಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೇ ಅವರು ಈ ಕೃತ್ಯ ನಡೆದಿದ್ದು ಆಸ್ಪತ್ರೆ ವೈದ್ಯರು ಸಿಬ್ಬಂದಿ ಗಮನ ಹರಿಸಬೇಕಾಗಿತ್ತು ಆದರೆ ಆಸ್ಪತ್ರೆ ಸಿಬ್ಬಂದಿ ಗಮನ ಹರಿಸಿಲ್ಲಾ ಈ ಘಟನೆ ಬಗ್ಗೆ ತಾಲೂಕ ವೈದ್ಯಾಧಿಕಾರಿಗಳು ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕೆಂದು ತಿಳಿಸಿದರು, ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಕರೆಸಿ, ಮಗುವನ್ನು ಬಿಟ್ಟು ಹೋದ ಪೋಷಕರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲ್ಲಪ್ಪ ಡಿಕೆ, ಸುನಿಲ್ ಕುಮಾರ್ ವಾಗ್ಮರೆ, ಪಿಎಸ್ಐ ವಸಿಂ ಪಟೇಲ್ ಸೇರಿದಂತೆ ಇನ್ನಿತರರು ಇದ್ದರು.