September 7, 2025

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}

ಔರಾದ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಮುಂಬರುವ ಏಪ್ರಿಲ್ 01 ರಿಂದ ಕೂಲಿ ಮೊತ್ತವನ್ನು 349 ರಿಂದ 370ಕ್ಕೆ ಹೆಚ್ಚಳ ಮಾಡಲಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ಕೂಲಿಕಾರರು ನಗರದತ್ತ ಕೆಲಸಕ್ಕಾಗಿ ವಲಸೆ ಹೋಗದೆ ನಿಮ್ಮೂರಲ್ಲೆ ಕೆಲಸ ಮಾಡಿ ಇದರ ಲಾಭವನ್ನು ಪಡೆಯಬೇಕು.

ನರೇಗಾ ಯೋಜನೆಯಡಿ ಪ್ರತಿ ದಿನದ ಕೂಲಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಕೂಲಿ ವೇತನ 370 ಕ್ಕೆ ಹೆಚ್ಚಳ ಮಾಡಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ಮಾಡಿ ರೂ. 37,000 ತಮ್ಮ ಖಾತೆಗೆ ನೇರವಾಗಿ ಜಮಾ ಮಾಡಿಕೊಳ್ಳಬಹುದು.

ರೈತರು, ಕೂಲಿಕಾರರು ಮನೆಯಲ್ಲಿ ದನ, ಕುರಿ, ಕೋಳಿಗಳಿದ್ದರೆ, ನರೇಗಾ ಯೋಜನೆಯಡಿ ಶೆಡ್ ಗಳು ನಿರ್ಮಿಸಿಕೊಳ್ಳಬಹುದು. ಜೊತೆಗೆ ಆರ್ಥಿಕ ಸದೃಢರಾಗಬಹುದು.

ನರೇಗಾ ಯೋಜನೆಯ ಸೌಲಭ್ಯ ಪಡೆಯಲು ಜಾಬ್ ಕಾರ್ಡ್ ಇರಬೇಕು. ಕಾರ್ಡ್ ಇಲ್ಲದವರು ತಮ್ಮ ಕುಟುಂಬದಲ್ಲಿ 18 ವರ್ಷ ಮೆಲ್ಪಟ ಸದಸ್ಯರ ಆಧಾರ್ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್ ,ರೇಷನ್ ಕಾರ್ಡ್ಸ್ ಪ್ರತಿ ಹಾಗೂ ಎರಡು ಫೋಟೋಗಳು ಗ್ರಾಮ ಪಂಚಾಯಿತಿಗೆ ನೀಡಿದರೆ ಉಚಿತವಾಗಿ ಹೊಸ ಜಾಬ್ ಕಾರ್ಡ್ ನೀಡಲಾಗುವುದು.

ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಅಷ್ಟೇ ಅಲ್ಲದೆ ಜಾಮೀನು ಇರುವ ರೈತರು ಕ್ಷೇತ್ರದ ಬದು, ಕೃಷಿ ಹೊಂಡ, ತೋಟಗಾರಿಕೆ ಬೆಳೆ ದಾಳಿಂಬೆ ಸಪೋಟ, ನುಗ್ಗೆಕಾಯಿ ಜೊತೆ ರೇಷ್ಮೆ ಬೆಳೆಯಲು ಸೌಲಭ್ಯಗಳು ಪಡೆದುಕೊಳ್ಳಬಹುದು.

ಪರಿಶೀಷ್ಟ ಜಾತಿ, ಪರಿಶೀಷ್ಟ ಪಂಗಡ ಹಾಗೂ ತಾಂಡಾ ಮಹಿಳೆಯರು ಮತ್ತು ಬಿಪಿಎಲ್ ಕಾರ್ಡುದಾರರು ಇದರ ಹೆಚ್ಚಿನ ಲಾಭಪಡೆಯಬೇಕು ಎಂದು ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——–
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗೆ ಭೇಟಿ ನೀಡಿ, ಹಾಗೂ ಉಚಿತ ಏಕೀಕೃತ ಸಹಾಯವಾಣಿ ಸಂಖ್ಯೆ – 827750600 ಗೆ ಕರೆ ಮಾಡಬಹುದು ಎಂದು ಔರಾದ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಹಾಗೂ ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771