
ಬೀದರ:- ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಬೀದರ ಇವರುಗಳ ಸಂಯುಕ್ತಾಶ್ರದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಬಾಲ ಭವನದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ವಿಧ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯಾವಾಗಿ ಜೀವನ ಯಶಸ್ವಿಯಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಅವರು 3 ವಿಧ್ಯಾರ್ಥಿ ಹಾಗೂ 5 ವಿಧ್ಯಾರ್ಥಿನಿಯರಿಗೆ (ವಿಜೇತ ಮಕ್ಕಳಿಗೆ) ಪ್ರಶಸ್ತಿ ಪತ್ರಗಳನ್ನು ವಿತರಿಸಿ ಎಲ್ಲರಿಗೂ ಶುಭ ಕೋರಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದೀಲಿಪ ಬದೋಲೆ ಅವರು ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಹೊಂದಿದ್ದು ಆ ಪ್ರತಿಭೆಯನ್ನು ಹೊರ ಹಾಕಲು ಇದು ಒಳ್ಳೆಯ ವೇದಿಕೆಯಾಗಿದೆ ಎಂದರು.
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ವಿವರ: ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಬೀದರ ಗುರುನಾನಕ ಪಬ್ಲಿಕ್ ಸ್ಕೂಲಿನ 8ನೇ ತರಗತಿ ವಿದ್ಯಾರ್ಥಿನಿಯರಾದ ಸ್ಪೂರ್ತಿ ತಂದೆ ಶಿವಾನಂದ ಹಿರೇಂಠ (ಪ್ರಥಮ ಸ್ಥಾನ) ಹಾಗೂ ಅನನ್ಯ ತಂದೆ ರಾಮಯ್ಯ ಸ್ವಾಮಿ (ದ್ವಿತೀಯ ಸ್ಥಾನ).
ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಬೀದರ ಗುರುನಾನಕ ಪಬ್ಲಿಕ್ ಸ್ಕೂಲಿನ 7ನೇ ತರಗತಿ ವಿದ್ಯಾರ್ಥಿನಿ ತನ್ಮಯ ತಂದೆ ಕರಣಕುಮಾರ (ಪ್ರಥಮ ಸ್ಥಾನ), ಬೀದರನ ಶ್ರೀಮತಿ ಇಂದಿರಾಬಾಯಿ ಗುರುತಪ್ಪಾ ಶೇಟ್ಕರ್ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಗುರುಚರಣ ತಂದೆ ವಿನಯಕುಮಾರಗೆ (ದ್ವಿತೀಯ ಸ್ಥಾನ).
ವಿಜ್ಞಾನದಲ್ಲಿ ಸೃಜನಾತ್ಮಕ ಅವಿಷ್ಕಾರ ಸ್ಪರ್ಧೆಯಲ್ಲಿ ಬೀದರನ ಗುರುನಾನಕ ಪಬ್ಲಿಕ್ ಸ್ಕೂಲಿನ್ 8ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿ ಶೇಖ್ ರಾಶೀದ್ ತಂದೆ ಶೇಖ ಮಿಫತಾ ಉದ್ದೀನ್ (ಪ್ರಥಮಸ್ಥಾನ), ಮೀನಕೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ವರ್ಷಿತಾ ತಂದೆ ರಾಜಕುಮಾರ (ದ್ವಿತೀಯ ಸ್ಥಾನ).
ಚಿತ್ರಕಲೆ ಸ್ಪರ್ಧೆಯಲ್ಲಿ ಬೀದರ ಗುರುನಾನಕ ಪಬ್ಲಿಕ್ ಸ್ಕೂಲಿನ 8ನೇ ತರಗತಿ ವಿದ್ಯಾರ್ಥಿಗಳಾದ ಶ್ರೀಮಯಿ ದೇಶಪಾಂಡೆ ತಂದೆ ಶ್ರೀಕಾಂತ ದೇಶಪಾಂಡೆ (ಪ್ರಥಮ ಸ್ಥಾನ) ಹಾಗೂ 5ನೇ ತರಗತಿಯ ಅರ್ಶಿಯಾ ತಂದೆ ಸುಮೇಂದ್ರನಾಥ ಬಿಸ್ವಾಸ್ (ದ್ವಿತೀಯ ಸ್ಥಾನ)
ಮಹಿಳಾ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರ ಎಮ್.ಎಸ್. ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಗುರುರಾಜ ಅವರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಅಧೀಕ್ಷಕರು, ಸರಕಾರಿ ಬಾಲಕರ ಬಾಲ ಮಂದಿರ ಹಾಗೂ ಪ್ರಭಾರಿ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳು ರೂಪಾ ಎಸ್.ಕೆ ಅವರು ಮಾತನಾಡಿ, ಸೋತರು ಎದೆಗುಂದಬಾರದು, ಮುಂದೆ ನಡೆದು ಗೆಲುವು ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಗೌರಿಶಂಕರ ಸ್ವಾಗತಿಸಿ ನಿರೂಪಿಸಿದರೆ, ಜಿಲ್ಲಾ ಬಾಲ ಭವನ ಸಂಯೋಜಕರಾದ, ಸೂರ್ಯಕಾಂತ ಮೊರೆ ವಂದಿಸಿದರು.