
ಔರಾದ:-ಔರಾದ್ ಪಟ್ಟಣ ಪಂಚಾಯಿತಿಗೆ ಎರಡನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾದ ನಂತರ ಪಪಂ ಕಚೇರಿಯಲ್ಲಿ ಮಂಗಳವಾರ ಅಧ್ಯಕ್ಷ
ಸರೂಬಾಯಿ ಘೂಳೆ ಹಾಗೂ ಉಪಾಧ್ಯಕ್ಷರ ರಾಧಾಬಾಯಿ ನರೋಟೆ ಕಚೇರಿ ಶಾಸಕ ಪ್ರಭು ಚವ್ಹಾಣ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಚವ್ಹಾಣ ಪಟ್ಟಣದ ಎಲ್ಲ ೨೦ ವಾರ್ಡಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದ ಅವರು ಪಟ್ಟಣದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದು ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಕಾರಂಜಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ಔರಾದ್ ಪಟ್ಟಣಕ್ಕೆ ನೀರು ತರುವ ಯೋಜನೆ ಟೆಂಡರ್ ಪ್ರಕ್ರೀಯೆ ಮುಗಿದರು ಕಾಮಗಾರಿ ಪ್ರಾರಂಭವಾಗುತ್ತಿಲ್ಲ ಇದು ನನಗೆ ಬೇಸರ ಮೂಡಿಸಿದ್ದು ಈ ಬಗ್ಗೆ ಸರಕಾರದ ಅಧಿಕಾರಿಗಳ ಜೋತೆ ಮಾತನಾಡಿದ್ದು ಶಿಘ್ರವೇ ಪ್ರಾರಂಭ ಮಾಡವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದರು.
ಪಪಂ ನಲ್ಲಿ ನೂತನ ಕಚೇರಿ ಪ್ರಾರಂಭಿಸಿ ಪ್ರತಿ ತಿಂಗಳು ಜನರ ಸಮಸ್ಯೆ ಆಲಿಸುವ ಕೆಲಸ ಮಾಡಲಾಗುವುದು ಅಲ್ಲದೆ ಪಟ್ಟಣ ಸುಂದರವನ್ನಾಗಿಸಲು ಮಾಸ್ಟರ್ ಪ್ಲಾö್ಯನ್ ಅಡಿ ತರಲಾಗಿದ್ದು, ರಿಂಗ ರೋಡ ರಸ್ತೆ ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದ ಅವರು ಪಪಂ ಅಧಿಕಾರಿಗಳು ಎಲ್ಲಿಯು ಸಮಸ್ಯೆಯಾಗದಂತೆ ಕಾಳಜಿ ವಹಿಸಿ ಜನರಿಗೆ ಸೇವೆ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಮುಸ್ಕೆ, ಪಪಂ ಸದಸ್ಯರಾದ ಧೋಂಡಿಬಾ ನರೋಟೆ, ದಯಾನಂದ ಘೂಳೆ, ಸಂತೋಷ ಪೋಕಲವಾರ್, ಅಂಬಿಕಾ ಪವಾರ್, ಸುರೇಖಾ ಸಿಂಗೆ, ಸಂಜು ವಡೆಯರ್, ಗುಂಡಪ್ಪ ಮುದಾಳೆ, ಮುಖಂಡರಾದ ಬಾಲಾಜಿ ನರೋಟೆ, ಕೃಷ್ಣಾ ನರೋಟೆ, ಶಿವಾಜಿ ಪಾಟೀಲ, ಕೈಲಾಶ ಘೂಳೆ, ಅಶೋಕ ಅಲಮಾಜೆ, ಯಾದು ಮೇತ್ರೆ, ಆನಂದ ದ್ಯಾಡೆ, ಸಂದೀಪ ಪಾಟೀಲ ಸೇರಿದಂತೆ ಪಪಂ ಸದಸ್ಯರು, ಮುಖಂಡರು ಹಾಗೂ ಸಿಬ್ಬಂದಿಗಳು ಇದ್ದರು.
—