
ಔರಾದ:- ಬೀದಿ ನಾಯಿಗಳ ನಿಯಂತ್ರಣ ಮತ್ತು ರೇಬೀಸ್ ತಡೆಗಟ್ಟಲು ಎಲ್ಲರು ಕೈಜೋಡಿಸಬೇಕು ಸಾಂಕ್ರಮಿಕ ರೋಗ ಶಾಸ್ತ್ರಜ್ಞ ಡಾ. ತಸ್ಲೀಮ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಣ್ಗಾವಲು ಘಟಕ ಸಹಯೋಗದಲ್ಲಿ ಪಟ್ಟಣದ ಬಸವನಗಲ್ಲಿ ಸರ್ಕಾರಿ ಹಿರಿಯ ಉರ್ದು ಮಾಧ್ಯಮ ಶಾಲೆಯಲ್ಲಿ ರೇಬೀಸ್ ಮತ್ತು ಲೆಪ್ಟೋಸ್ಪೀರೋಸಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದಲ್ಲಿ ವರ್ಷಕ್ಕೆ ರೇಬೀಸ್ ನಿಂದ ೨೦ಸಾವಿರಕ್ಕೂ ಹೆಚ್ಚು ಜನರು ಮರಣ ಹೊಂದುತ್ತಾರೆ. ಅದರಲ್ಲಿ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ರೇಬೀಸ್ ಒಂದು ವೈರಸ್ ಆಗಿದ್ದು, ಪ್ರಾಣಿಗಳ ಕಡಿತದ ಮೂಲಕ ಮನುಷ್ಯರಿಗೆ ಈ ವೈರಸ್ ಹಬ್ಬುತ್ತದೆ. ನಾಯಿಗಳನ್ನು ಕಚ್ಚಿದ ಕೂಡಲೇ ವೈಧ್ಯರನ್ನು ಭೇಟಿ ಆಗಿ ಲಸಿಕೆ ಪಡೆಯಬೇಕು,ಉತ್ತಮವಾದ ಪ್ರಯೋಗಾಲಯಗಳ ಮೂಲಕ ಮಾಹಿತಿ ಪಡೆದು ಚಿಕಿತ್ಸೆ ಪಡೆಯಬಹುದೆಂದರು.
ಹಿರಿಯ sಸಾಂಕ್ರಮಿಕ ರೋಗ ಶಾಸ್ರö್ತಜ್ಞೆ ಡಾ. ವೈಶಾಲಿ, ಅಬ್ರಾಹಂ, ವಿದ್ಯಾಸಾಗರ್, ಮುಖ್ಯಗುರು ಗೌಸ್ ಇತರರಿದ್ದರು.