
ಔರಾದ:-ಹುತಾತ್ಮ ಭಗತ್ ಸಿಂಗ್ ನನ್ನು ನಾವು ಕೇವಲ ದೇಶಪ್ರೇಮಿ, ಹುತಾತ್ಮ ಎಂದು ಪರಿಗಣಿಸುವದಷ್ಟೇ ಅಲ್ಲದೆ ಅಮೋಘ ಶಕ್ತಿ ಯಾದವರು ಭಾರತದ ಯುವಕರಿಗೆ ಪ್ರೇರಣಾದಾಯಕರಾಗಿದ್ದಾರೆ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಧಾರಾಣಿ ಸಂಗಪ್ಪ ಹೇಳಿದರು.
ಸಂತಪೂರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ 84ನೇ ಪುನಶ್ಚೇತನ ಕಾರ್ಯಗಾರ ಹಾಗೂ ಹುತಾತ್ಮ ವೀರ ಭಗತ್ ಸಿಂಗ್ ರವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ ಹುತಾತ್ಮ ವೀರ ಭಗತ್ ಸಿಂಗ್ ರವರು ದೇಶದ ಸ್ವತಂತ್ರಕ್ಕಾಗಿ ಚಿಕ್ಕವಯಸ್ಸಿನಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ಬ್ರಿಟಿಷರ ವಿರುದ್ಧ ಸಿಡಿದೆದ್ದು ಹೋರಾಡಿದ ಅಪ್ರತಿಮ ಕ್ರಾಂತಿಕಾರಿಯನ್ನು ಯುವಕರು ಮರೆಯಬಾರದು ಎಂದರು.
ಉಪನ್ಯಾಸಕಿ ಪ್ರಿಯಾಂಕಾ ಗುನ್ನಳ್ಳಿಕರ್ ಮಾತನಾಡಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ತನ್ನ ಪ್ರೇರಣಾ ಶಕ್ತಿಯಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಭಗತ್ ಸಿಂಗ್ ಯಾಗಿದ್ದಾರೆ ಎಂದರು.
ಉಪನ್ಯಾಸಕರಾದ ಶಿವಪುತ್ರ ಧರಣಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ನಿರ್ಮಲಾ ಜಮಾದಾರ, ರಾಜಕುಮಾರ ಹಳ್ಳಿಕರ್, ಜಿತೇಂದ್ರ ಡಿಗ್ಗಿ, ಸುಧೀರ್ ಆಲೂರೆ, ಸಂತೋಷ ಧೋಳಗಂಡೆ ಇದ್ದರು.
‘ಹುತಾತ್ಮ ಭಗತ್ ಸಿಂಗ್ ರವರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ’ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸುಧಾರಾಣಿ ಸಂಗಪ್ಪ, ಕೀರ್ತನಾ ಅನಿಲಕುಮಾರ ಹಾಗೂ ಖಂಡು ಶಿವಾಜಿ ವಿಜೇತ ವಿದ್ಯಾರ್ಥಿಗಳನ್ನು ಕ್ರಮವಾಗಿ ಸನ್ಮಾನಿಸಿ ಗೌರವಿಸಲಾಯಿತು