ಕಮಲನಗರ: ಡಿಗ್ಗಿ ಅಂಗನವಾಡಿ ಕೇಂದ್ರ -1 ದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಮತ್ತು ಸಸಿ ನಡುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ ಸದಸ್ಯ ಸುಗುನಾವತಿ ಬಿರಾದಾರ ಶುಕ್ರವಾರ ಚಾಲನೆ ನೀಡಿದರು.
ಮುಖ್ಯ ಅತಿಥಿ ಶೋಭಾ ರಾಠೋಡ ಮೇಲ್ವಿಚಾರಕರು ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ, ಮತ್ತು ಗರ್ಭಿಣಿ ಮಹಿಳೆಯರು, ಕಿಶೋರಿ ಎಲ್ಲರೂ ಆಹಾರ ಕೀಟ’ ನ ಲಾಭ ಪಡೆಯಬೇಕು.
ಅಂಗನವಾಡಿ ಕೇಂದ್ರದಲ್ಲಿ ದೊರೆಯುವ ಪೌಷ್ಟಿಕ ಆಹಾರ ಸೇವನೆ ತಪ್ಪದೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗರ್ಭಿಣಿಯರಿಗೆ ಮತ್ತು ಪಾಲಕರಿಗೆ ಸತ್ಕಾರಿಸಿ ಪೌಷ್ಟಿಕ ಆಹಾರ ಕಿಟ್ ನೀಡಲಾಯಿತು.
ನಂತರ ಹಸಿರೆ ಉಸಿರು ಎನ್ನುವಂತೆ, ಪರಿಶುದ್ಧವಾದ ನಮ್ಮ ಜೀವಕ್ಕೆ ಅತ್ಯ ಅಮೂಲ್ಯವಾಗಿದ್ದು, ಗಿಡ ಮರಗಳ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು. ಎಲ್ಲರೂ ಸೇರಿ ಗಿಡ ನೆಟ್ಟಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಡಿಗ್ಗಿಯ ಸಿಬ್ಬಂದಿ, ಗರ್ಭಿಣಿಯರು, ಸವಿತಾ ರಾಂಪುರೆ ಆಶಾ ಕಾರ್ಯಕರ್ತ, ವಿವಿಧ ಅಂಗನವಾಡಿ ಕೇಂದ್ರ ದ ಶಿಕ್ಷಕಿಯರು, ಡಿಗ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಇದ್ದರು.
ವರದಿಗಾರರು
ಎಸ್.ಎಸ್.ದಿಂಡೆ
