
ಔರಾದ:-ಧರ್ಮಸ್ಥಳ ಹಿಂದೂ ಧರ್ಮದ ಪವಿತ್ರವಾದ ಧಾರ್ಮಿಕ ಕ್ಷೇತ್ರವಾಗಿದೆ. ಈ ಕ್ಷೇತ್ರದ ಪವಿತ್ರತೆಗೆ ಧಕ್ಕೆ ಬರುವ ರೀತಿಯಲ್ಲಿ ಅಪಪ್ರಚಾರ ಮಾಡಿರುವಂತ ಕುತಂತ್ರಿಗಳನ್ನು ಕೂಡಲೇ ಬಂಧಿಸಿ, ಷಡ್ಯಂತರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ಕ್ಷಮೆಯಾಚಿಸ ಬೇಕೆಂದು ವಿಶ್ವ ಹಿಂದೂ ಪರಿಷತ್ತ ಹಾಗೂ ಬಜರಂಗದಳ ಮತ್ತು ತಾಲೂಕಿನ ಹಿಂದೂ ಅಭಿಮಾನಿಗಳ ವತಿಯಿಂದ ಗುರುವಾರ ಸಾಯಿ ಕಲ್ಯಾಣ ಮಂದಿರದಲ್ಲಿ 108 ಜನರಿಂದ 108 ನಮ: ಶಿವಾಯ” ಮಂತ್ರದ ಜಪ ಮಾಡಲಾಯಿತ್ತು.
ಎಬಿವಿಪಿ ಮುಖಂಡ ಅಶೋಕ ಶೆಂಬೆಳ್ಳಿ ಮಾತನಾಡಿ ಅನಾಮಿಕ ಮುಸುಕುಧಾರಿ ಹೇಳಿಕೆಯನ್ನು ಸಮರ್ಪಕವಾಗಿ ಪರಾಮರ್ಶಿಸಿ ಸತ್ಯ ಸತ್ಯತೆಯನ್ನು ‘ಅರಿಯದ ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದಲ್ಲಿ 13 ಜಾಗಗಳನ್ನು ತೋರಿಸಿ ತಾನು ನೂರಾರು ಹೆಣಗಳನ್ನು ಅಂತ್ಯಕ್ರಿಯೆ ಮಾಡಿದ್ದೇನೆ ಎಂದು ಆರೋಪಿಸಿರುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಎಸ್.ಐ.ಟಿ. ನಡೆಸಿದರೂ ಯಾವುದೇ ರೀತಿ ಆರೋಪಗಳಿಗೆ ಸಾಕ್ಷಧಾರಗಳು ಸಿಗದೆ ಇರುವ ವಿರುದ್ದ ಆರೋಪಿಯ ವಿರುದ್ಧ ಕಠಿಣಾ ಕ್ರಮ ಜರುಗಿಸ ಬೇಕು ಎಂದು ವತ್ತಾಯಿಸಿದ್ದರು.
ಕಾರ್ಯಕ್ರಮದಲ್ಲಿ ರಾಜಕುಮಾರ ನಾಯಕ,ಕಲ್ಲಪ್ಪ ದೇಶಮುಖ, ಅಂಬಾದಾಸ ನೇಳಗೆ,ಶಿವಕುಮಾರ ಮಂಡ್ಲಾಪೂರೆ, ಅನೀಲ ದೇವಕತ್ತೆ, ಸಂಯೋಜಕರು ಕೇಶವ ಹಕ್ಕೆ, ಕಾರ್ಯದರ್ಶಿ ಬಸು ಚೌಕನಪಳ್ಳೆ,ರಾಘವೇಂದ್ರ ಗೌಡಾ ತಾಲೂಕು ಯೋಜನಾಧಿಕಾರಿ,ಸೇರಿದಂತೆ ಹಲವರು ಇದ್ದರು. ಅನೀಲ ಜಿರೋಬೆ ಸ್ವಾಗತಿಸಿ ವಂದಿಸಿದರು.
ವರದಿಗಾರರು.
ಎಸ್.ಎಸ್.ದಿಂಡೆ.