
ಔರಾದ:- ಪಟ್ಟಣದ ವಾರ್ಡ ನಂ 16 ರಲ್ಲಿ ಸಾರ್ವಜನಿಕರು ಮೂಲಭುತ ಸೌಕರ್ಯಗಳಿಂದ ವಂಚಿತರಾಗಿರುತ್ತಾರೆ. ರಸ್ತೆ, ವಳಚರಂಡೀ, ದಾರಿದೀಪ, ಕೂಡಿಯುವ ನಿರಿನ ಟ್ಯಾಂಕ, ಹಾಗೂ 09 ತಾಂಡಾಗಳ ಖಾತಾ ನಕಲು ನಿಡಲು ವಿಳಂಬನಿತಿ ಅನುಸರಿಸುತ್ತಿರುವ ಮುಖ್ಯಾಧಿಕಾರಿಗಳ ವಿರುದ್ಧ ಸುಕ್ತ ತನಿಖೆ ನಡಿಸಬೇಕೆಂದು ಸೋಮುವಾರ ಪಟ್ಟಣ ಪಂಚ್ಯಾಯತ ಎದುರಗಡೆ ಪಟ್ಟಣ ಪಂಚ್ಯಾಯತ ಸದಸ್ಯ ಶಿವಾಜಿ ರಾಠೋಡ,ಹಾಗೂ ತಾಂಡಾ ಜನರು ಉಪವಾಸ ಸತ್ಯಗೃಹ ನಡೆಸಯತ್ತಿದ್ದಾರೆ.
ಪಟ್ಟಣದ ವಾರ್ಡ ನಂ 16 ರಲ್ಲಿ ಮೂಲಭೂತ ಸೌಕರ್ಯ ಸಾರ್ವಜನಿಕರಿಗೆ ನಿಡಲು ಹಲವಾರು ಸಲ ಮುಖ್ಯಾಧಿಕಾರಿಯವರು ಸದರಿ ವಿಷಯವನ್ನು ಸ್ಪಂಧಿಸುವಲ್ಲಿ ವಿಫಲರಾಗಿರುತ್ತಾರೆ. ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ 09 ತಾಂಡಾಗಳ ನಿವೇಶನ ಮಾಲಿಕತ್ವ ಖಾತಾ ನಕ್ಕಲು ನಿಡುವಂತೆ, ವಾಟರ ರಿಪೇರಿ, ವಿದ್ಯುತ ದಾರಿದೀಪ ರಿಪೇರಿ, ಬೊರವೇಲ ರಿಪೇರಿ, ಮೂಲಭೂತ ಸೌಕರ್ಯಗಳೂ ಸಾರ್ವಜನಿಕರಿಗೆ ನೀಡಲು ವಿಫಲರಾದ ಮುಖ್ಯಾಧಿಕಾರಿಗಳಿಗೆ ದುಕಾರ ವಿರಲಿ ಎಂದು ಘೋಶನೆ ಕುಗಿದ್ದರು.
ನಿರಂತರ ಉಪವಾಸ ಧರಣಿ ಸತ್ಯಾಗ್ರಹ ಪಟ್ಟಣ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಳ್ಳಲಾಗಿದ್ದು ಸದರಿ ಬೇಡಿಕೆಗಳನ್ನು ಇಡೆರಿಸುವಂತೆ ದಿನಾಂಕ 07/08/2025 ರಂದು ಮನವಿ ಪತ್ರ ನಿಡಲಾಗಿದ್ದರು ಕೂಡ ಸಂಭಂಧಪಟ್ಟ ಮುಖ್ಯಾಧಿಕಾರಿ ಹಾಗೂ ಮೆಲಾಧಿಕಾರಿಗಳು ಕ್ರಮ ಜರಿಗುಸುವಲ್ಲಿ ವಿಫಲರಾಗಿರುತ್ತಾರೆ.
ಉಪವಾಸ ಧರಣಿ ಸತ್ಯಾಗ್ರಹ ಹೋರಾಟವು ಬೇಡಿಕೆ ಈಡೇರಿಸುವತನಕ ನಿರಂತರವಾಗಿ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಭಿಮರಾವ ,ಅನೀಲ,ಸಂಜು, ರಾಜು,ದೋಂಡಿಬಾ,ಲಕ್ಷ್ಮಣ,ಜೈರಾಮ,ಶಿವಾಜಿ,ದೇವಿದಾಸ,ರಾಹುಲ,ಸಂತೋಷ,ಚೆಂದರ್,ಸುರೇಶ,ಭೀಮರಾವ ಹಾಗೂ ತಾಂಡ ಜನರು ಹಾಗೂ 16ನೇ ವಾರ್ಡಿನ ಜನರು ಉಪಸ್ಥಿತಿ ಇದ್ದರು.