
ಶಹಾಪುರ:ಇಲ್ಲಿನ ಪ್ರಸಿದ್ಧ ದಾಸೋಹ ಕ್ಷೇತ್ರದಲ್ಲಿ ಎಪ್ರಿಲ್ 2 ರಂದು 103 ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಜಾನುವಾರಗಳ ಜಾತ್ರಾ ಮಹೋತ್ಸವ ಅಂಗವಾಗಿ ಪುರಾಣ ಪ್ರವಚನ ಪ್ರಾರಂಭ ದಿನದಂದು ವಿವಿಧ ಕಾರ್ಯಕ್ರಮಗಳ ಹಾಗೂ ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ
ಸಣ್ಣ ಕೈಗಾರಿಕಾ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಮತ್ತು ಅವರ ಪತ್ನಿ ಶ್ರೀ ಮತಿ ಭಾರತಿ ದರ್ಶನಾಪುರ ಅವರೊಂದಿಗೆ ಚಾಲನೆ ನೀಡಿದರು. ನಗರದ ವಿವಿಧ ಮಠಾದೀಶರಾದ ಪೂಜ್ಯ ಶ್ರೀ ಸುಗೂರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಪೂಜ್ಯ ಶ್ರೀ ಮ ಪ್ರ ಗುರುಪಾದ ಸ್ವಾಮಿಗಳು,ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳು ,ಸಗರದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ನಾಗನಟಗಿ ಸಿದ್ದರಾಮಯ್ಯ ಸ್ವಾಮಿಗಳ ಸಾನಿದ್ಯದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಸಹಕಾರದಿಂದ
ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ನೂತನ ದಾಸೋಹ ಭವನ ಮತ್ತು ವಸತಿ ಕೋಣೆಗಳಿಗೆ,ಭಕ್ತರ ನಿರ್ಮಾಣದ ಮಾಲಗಂಭ ವನ್ನು ರಿಬ್ಬನ್ ಕತ್ತರಿಸುವ ಮೂಲಕ ಸಚಿವರು ಚಾಲನೆ ನೀಡಿದರು. ಶ್ರೀ ಸಂಸ್ಥಾನ ಗದ್ದುಗೆ ಪೂಜ್ಯರಾದ ಬಸವಯ್ಯ ಶರಣರ ನೇತೃತ್ವದಲ್ಲಿ ಕರವೇ ಉತ್ತರ ಕರ್ನಾಟಕ ಅದ್ಯಕ್ಷರು ಹಾಗೂ ಗದ್ದುಗೆ ವಂಶಸ್ಥರಾದ ಶರಣು ಬಿ ಗದ್ದುಗೆ ಮತ್ತು ಗದ್ದುಗೆ ವಂಶಸ್ಥರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶಹಾಪುರದ ವಿವಿಧ ಸಮಾಜದ ಮುಖಂಡರಾದ ಸಿದ್ದಣ್ಣ ಆರಬೋಳ,ಡಾ ಶಿವರಾಜ್ ದೇಶಮುಖ,ಮಹೇಶ್ ಆನೆಗುಂದಿ,ಸಣ್ಣ ನಿಂಗಪ್ಪ ನಾಯಕೊಡಿ,ಮಹಾದೇವ ಸಾಲಿಮನಿ,ಮಲ್ಲಿಕಾರ್ಜುನ ಗಂಗಾದರ ಮಠ,ಗುರು ಎಸ್ ಕಾಮಾ,ರಾಘವೇಂದ್ರ ಯಕ್ಷಿಂತಿ, ಬಸವರಾಜ ಆನೆಗುಂದಿ,ಗುಂಡಪ್ಪ ತುಂಬಗಿ,ಚನ್ನಪ್ಪಗೌಡ,ಬಸವರಾಜ ಹಿರೇಮಠ,ಬಸವರಾಜ ಹೆರುಂಡಿ,ಸುಗಪ್ಪ ಚಟ್ರಕಿ,ನೀಲಪ್ಪ ಚೌದ್ರಿ,ವೀರಭದ್ರ ಚೌದ್ರಿ,ರಾಜು ಆನೆಗುಂದಿ,ಸಿದ್ದು ಆನೆಗುಂದಿ,ಬಸವರಾಜ,ನಟರಾಜ ಗಟ್ಟಿನ್,ನಾಗೇಂದ್ರಪ್ಪ ಬಾಸುತ್ಕರ್,ವಿನೋದ ಗಡ್ಡಾಳೆ,ರಾಜಾ ಪಟೇಲ್,ಸೊಲಬಣ್ಣ ಅನೆಗುಂದಿ,ಓಂಪ್ರಕಾಶ,ಗುಂಡಪ್ಪ ಕೋರಿ,ಶಿವು ಆನೆಗುಂದಿ,ಸುಗುರೇಶ ಹೆರುಂಡಿ,ಚನಬಸ್ಸು ಸಾಹು ಯಳವಾರ,ಪ್ರಭು ಸಾಹು ಯಳವಾರ,ಸೇರಿದಂತೆ ಅನೇಕ ಭಕ್ತರು ಹಾಗೂ ಅಧಿಕಾರಿಗಳು ಸಾಕ್ಷಿಯಾಗಿದ್ದರು.ಇದೆ ಸಂದರ್ಭದಲ್ಲಿ ಮಾಲಗಂಭ ನಿರ್ಮಾಣ ಸೇವೆ ಮಾಡಿದ ಬಂದಯ್ಯ ಮಹಾದೇವಯ್ಯ ಹುಗ್ಗೆಳ್ಳಿಮಠ ದಂಪತಿಗಳಿಗೆ ಹಾಗೂ ಶಿಲ್ಪಿಗಳಿಗೆ ಗೌರವಿಸಲಾಯಿತು