
ಶಹಾಪುರ; ನಗರದ ಹಳೇ ಬಸ್ ನಿಲ್ದಾಣದಲ್ಲಿ ಕೆಕೆಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ ಚಿಲ್ಲರೆ ಕೇಳಲು ಹೋದ ಪ್ರಯಾಣಿಕ ಯುವಕ ಸಲಾಹುದ್ದೀನ್‌ಗೆ ಬಸ್ ಚಾಲಕ ರಾಮಪ್ಪ ಗೋನಾಲ್ ಎನ್ನುವವರು ಬಡಿಗೆ(ಕಟ್ಟಿಗೆ)ಯಿಂದ ಬಲವಾಗಿ ಹೊಡೆದಿದ್ದು ಸ್ಥಳದಲ್ಲೇ ನೆಲಕ್ಕೇ ಬಿದ್ದ ಯುವಕ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳೀಯರು ಕೂಡಲೇ ಯುವಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಘಟನೆ ಹಿನ್ನಲೇ;
ಕಲಬುರಗಿ ಮೂಲದ ಯುವಕ ಸಲಾಹುದ್ದೀನ್(೨೩) ತನ್ನ ಕೆಲಸಕ್ಕೆ ಸುರಪುರಕ್ಕೆ ಬಂದಿದ್ದ, ಇನ್ನೂ ಗೋನಾಲ್ ಮೂಲದ ಚಾಲಕ ರಾಮಪ್ಪನ ನಡುವೆ ಚಿಲ್ಲರೆ ಹಣಕ್ಕಾಗಿ ವಾಗ್ವಾದ ನಡೆದಿದೆ. ಕೇಲ ಹೊತ್ತು ನಿಲ್ದಾಣದ ಕಛೇರಿಯ ಒಳಗಡೆ ಮಾತಿಗೆ ಮಾತು ಬೆಳೆದಿದೆ. ನಂತರ ಮಾರಾಮಾರಿ ಉಂಟಾಗಿದೆ. ರೊಚ್ಚಿಗೆದ್ದ ಚಾಲಕ ರಾಮಪ್ಪನು ಅಲ್ಲೇ ಇದ್ದ ದೊಡ್ಡ ಬಡಿಗೆಯಿಂದ ಯುವಕನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಯುವಕ ನೆಲಕ್ಕೆ ಬಿದ್ದಿದ್ದು ಸ್ಥಳಿಯರೇ ಮುಂದಾಗ ಆಸ್ಪತ್ರೆ ಸೇರಿಸಿದ್ದಾರೆ. ಕೂಡಲೇ ಗಾಬಾರಿಗೊಂಡ ಕೇಲ ಚಾಲಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಕ್ಸ್;
ಜಿಲ್ಲೇಗಳಲ್ಲಿ ಬಸ್ ಚಾಲಕರ ಮತ್ತು ಪ್ರಯಾಣಿಕರ ನಡುವೆ ಹೊಡೆದಾಟ, ಬಡಿದಾಟ ಸಹಜವಾಗಿದೆ. ಇದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಸ್ ಚಾಲಕರು, ನಿರ್ವಾಹಕರು ಸ್ಥಳೀಯರು ಎನ್ನುವ ಕಾರಣಕ್ಕೆ ಪ್ರಯಾಣಿಕರಿಗೆ ದರ್ಪ ತೋರಿಸುತ್ತಿದ್ದಾರೆ. ಕೆಕೆಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಭದ್ರತೆ ಇಲ್ಲದೆ ಇದ್ದು ಪೊಲೀಸ್ ಇಲಾಖೆಯವರು ಈ ಕುರಿತು ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.