
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಬೀದರ,ಭಾವೈಕ್ಯತೆಯ ನೆಲೆಯಾದ ಕರ್ನಾಟಕದ ಬೀದರ ಜಿಲ್ಲೆಯ ಅಷ್ಟೂರ್ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಅಲ್ಲಮಪ್ರಭುಗಳ ಜಾತ್ರೆಯು ಸಡಗರ ಸಂಭ್ರಮದಿಂದ ನಡೆಯುತ್ತಿದೆ.
ಈ ಬಾರಿ ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆಯಾಗಿ ನರೇಗಾ ಯೋಜನೆಯಡಿ ಪುನಃಚೇತನ ಗೊಂಡ ಕಲ್ಯಾಣಿಯು ಹೊರಹೋಮ್ಮತ್ತಿದೆ. ಈ ಜಾತ್ರೆಗೆ ಹಿಂದೂ- ಮುಸ್ಲಿಂನ ಸಹಸ್ರಾರು ಸಂಖ್ಯೆಯ ಬಾಂಧವರು ಬರುತ್ತಾರೆ.
ಕಲ್ಯಾಣಿಯು ಈಗ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಆಕರ್ಷಸುತ್ತಿದೆ.
ಬಹುಮನಿ ಕಾಲದಲ್ಲಿ ನಿರ್ಮಾಣವಾದ ಕಲ್ಯಾಣಯು. ಸಾಕಷ್ಟು ಅಹಿತ್ಯಗಳನ್ನು ಹೊಂದಿದೆ. ಅದರಲ್ಲಿ ಪ್ರಮುಖವಾಗಿ ಅಲ್ಲಪ್ರಭುಗಳು ಇಲ್ಲಿ ನೀರು ಚಿಮ್ಮಿಸಿದರು ಎಂಬುವುದು ಶಹ ಒಂದು.
ರಾಜ್ಯಪಾಲ ಥಾವರ್ ಚಂದ್ ಗೆಹಲೋಟ ಜಾತ್ರ ಸ್ಥಳಕ್ಕೆ ಭೇಟಿ ನೀಡಿ ಕಲ್ಯಾಣಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಸಿಇಓ ಡಾ. ಗಿರೀಶ್ ಬದೋಲೆ ಸಹ ಈ ಕೆಲಸಕ್ಕೆ ಹಾಡಿ ಹೊಗಳಿದರು ಮತ್ತು ಭವಿಷ್ಯದಲ್ಲಿ ನಮ್ಮ ಇಲಾಖೆಯಿಂದ ಜಲ ಸಂರಕ್ಷಣೆ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಈ ಹಿಂದೆ ನಮ್ಮ ಪೂರ್ವಜರು ನಿರ್ಮಾಣ ಮಾಡಿರುವ ಐತಿಹಾಸಿಕ ಸ್ಥಳಗಳನ್ನು ಉಳಿಸುವುದು ನಮ್ಮ ಆಧ್ಯ ಕರ್ತವ್ಯ ಈ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಇದನ್ನು ₹8 ಲಕ್ಷ ವೆಚ್ಚದಲ್ಲಿ ಪುನಃಚೇತನ ಮಾಡುವ ಕೆಲಸ ಮಾಡಲಾಗಿದೆ ಎಂದು ಬೀದರ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಹೇಳಿದರು.
ಈ ಹಿಂದೆ ಇದು ಮುತುವರ್ಜಿ ವಹಿಸದ ಕಾರಣ ಪಾಳು ಬಿದ್ದಿತ್ತು ಇದನ್ನು ಮನಗಂಡು ನರೇಗಾ ಯೋಜನೆಯಡಿಯಲ್ಲಿ ಇದಕ್ಕೆ ಪುನಃಚೇತನ ಮಾಡಲಾಗಿದೆ.ಈಗ ಇಲ್ಲಿಗೆ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ ಎನ್ನುತ್ತಾರೆ ಪಿಡಿಓ ಗಾಯತ್ರಿದೇವಿ.