
ದೈಹಿಕ ಆರೋಗ್ಯದ ದೃಷ್ಟಿಯಿಂದ ನೌಕರರು ಉದ್ಯೋಗದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದು ಬೀದರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಹೇಳಿದರು.
ಅವರು ಸೋಮವಾರ ನಾಗೋರ ಗ್ರಾಮದಲ್ಲಿ ಆಯೋಜಿಸಿದ ವಿಶೇಷ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇತ್ತೀಚಿಗೆ ಜೀವನದ ಒತ್ತಡದಿಂದಾಗಿ ಕ್ರೀಡೆಯ ಮಹತ್ವ ಕಳೆದು ಹೋಗುತ್ತಿದೆ. ಆದ್ದರಿಂದ ಎಲ್ಲರು ಕ್ರೀಡೆಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ನಾಗೋರ ಗ್ರಾಮ ಪಂಚಾಯ ಅಭಿವೃದ್ಧಿ ಅಧಿಕಾರಿ ರಾಮಣ್ಣ ಮಾತನಾಡಿ, ಕ್ರೀಡೆಯು ನಮಗೆ ಶಕ್ತಿ ನೀಡುವ ಜೊತೆ ದೈಹಿಕ ಹಾಗೂ ಮಾನಸಿಕ ನೇಮ್ಮದಿ ನೀಡುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ, ಗ್ರಾಮ ಪಂಚಾಯಿತಿ ಸದಸ್ಯರ ತಂಡ, ಗ್ರಾಮ ಪಂಚಾಯಿತಿ ಸಿಬ್ಬಂದಿ ವಗ೯ದವರ ತಂಡ ಭಾಗವಹಿಸಿದವು. ಕ್ರೀಡಾಪಟುಗಳಿಗೆ ಗ್ರಾಮ ಪಂಚಾಯಿತ ಉಪಾಧ್ಯಕ್ಷರು ಟಿ-ಶರ್ಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಫುಲಮ್ಮ, ಉಪಾಧ್ಯಕ್ಷ ನರಸಪ್ಪ ಬಿ. ಜಾನಕೆ, ದ್ವಿತೀಯ ದರ್ಜೆ ಸಹಾಯಕಿ ರೋಹಿಣಿ, ದ್ವಿತೀಯ ದರ್ಜೆ ಸಹಾಯಕ ಮಹೇಶ್ ಕಾಳೆ,ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹೆಚ್ಓಡಿ ಡಾ ಮಠ ಶಿವಲಿಂಗ ಯ್ಯ ಸ್ವಾಮಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.