
ಔರಾದ(ಬಿ) ತಾಲ್ಲೂಕಿನ ಉಪ್ಪಾರ ಸಮಾಜದ ನೂತನ ಅಧ್ಯಕ್ಷರಾಗಿ ಮಾರುತಿ ಶೆಟ್ಟೆ ಕೊಳ್ಳೂರ ಅವರನ್ನು ನೇಮಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷರಾದ ತಾನಾಜಿ ಸಗರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಮುಖಂಡರು ಹಾಗೂ ಸಮಾಜ ಬಾಂಧವರು ಒಮ್ಮತದಿಂದ ಮಾರುತಿ ಶೆಟ್ಟೆ ಕೊಳ್ಳೂರ ಅವರನ್ನು ಆಯ್ಕೆ ಮಾಡಿದ್ದಾರೆ.
ಅದರಂತೆ ಗೌರವ ಕಾರ್ಯಾಧ್ಯಕ್ಷರಾಗಿ ಯಾದುರಾವ ಸಗರ್ ನಂದ್ಯಾಳ, ಉಪಾಧ್ಯಕ್ಷರಾಗಿ ಸಂಜುಕುಮಾರ ರಾಮುಲು ಚಿಂತಾಕಿ ಹಾಗೂ ರಾಮ್ ಮಾಧವರಾವ ಕರ್ಕ್ಯಾಳ, ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಲ್ಲಪ್ಪ ಕರಂಜಿ, ಜಂಟಿ ಕಾರ್ಯದರ್ಶಿ ಶಿವಾಜಿ ಗಣಪತಿ ಬೆಲ್ದಾಳ, ಕಾರ್ಯದರ್ಶಿ ದತ್ತು ಇಟಗ್ಯಾಳ, ಖಜಾಂಚಿ ಸಂತೋಷ ಸೂರ್ಯಕಾಂತ ಔರಾದ, ಸದಸ್ಯರಾಗಿ ರಾಜು ಅರ್ಜುನ್, ಮಾರುತಿ ರಾಮಚಂದ್ರ, ರಾಜಕುಮಾರ ಬಾಲಪ್ಪ, ಬಾಲಾಜಿ ಭೀಮರಾವ ಹಾಗೂ ಗಣೇಶ ಸಗರ್ ಅವರು ಆಯ್ಕೆಯಾಗಿದ್ದಾರೆ.
ಹೊಸ ಅಧ್ಯಕ್ಷರ ನೇಮಕಾತಿಗೆ ಸಮಾಜದ ಮುಖಂಡರಾದ ರಾಮಣ್ಣಾ ಶೆಟ್ಟೆ, ಮನೋಹರ ಔರಾದ, ಅರ್ಜುನ್ ಶೆಟ್ಟೆ, ಭೀಮಣ್ಣಾ ಚಂದಾ, ಮಾರುತಿ ನರ್ವಾ, ಸಂಜುಕುಮಾರ ಅತನೂರೆ, ಅನೀಲ ಉಪ್ಪಾರ, ನಾಗನಾಥ ನರ್ವಾ, ಸಾಗರ ಹುಪ್ಳೆ, ದೇವಿದಾಸ ಕರ್ಕ್ಯಾಳ, ಶಿವಾಜಿ ಶೆಟ್ಟೆ, ನರಸಪ್ಪ ಅತನೂರೆ, ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.