July 20, 2025

ಶಹಾಪುರ; ರೈತರ ಸಮಸ್ಯೆಗಳ ಬಗ್ಗೆ ಯಾವ ಪಕ್ಷದವರು ಮಾತನಾಡಲ್ಲ. ಎಲ್ಲ ರಾಜಕೀಯ ಪಕ್ಷದ ಮುಖಂಡರೂ ಅವರದ್ದೇ ಸ್ವಾರ್ಥದಲ್ಲಿ ಕಾಲ ಕಳೆಯುತ್ತಾರೆ. ಸರಕಾರಗಳು ರೈತರ ಬಗ್ಗೆ ಕಾಳಜಿ ವಹಿಸಿ, ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಕೊಟ್ಟರೆ ಸಾಕು ಎಂದು ಜಿಡಗಾ ಶ್ರೀಮಠ ಮುಗಳಖೋಡನ ಪೂಜ್ಯ ಶ್ರೀ ಡಾ.ಮುರಘರಾಜೇಂದ್ರ ಮಹಾಸ್ವಾಮೀಜಿಗಳು ಹೇಳಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ ಮತ್ತು ರೈತ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ
ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾದ ದರ ಸಿಗುತ್ತಿಲ್ಲ. ಅನ್ನದಾತನ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಮೂಲಕ ರೈತರ ಹಿತ ಕಾಯುವ ಕೆಲಸ ಸರ್ಕಾರಗಳು ಮಾಡಬೇಕು. ನಾರಾಯಣಪೂರ ಜಲಾಶಯಕ್ಕೆ ಒಳಪಡುವ ಏಡದಂಡೆ ಮತ್ತು ಬಲದಂಡೆಗೆ ಕಾಲುವೆಗೆ ಏಪ್ರೀಲ್ ಕೊನೆಯ ತನಕ ನೀರು ಹರಿಸಬೇಕು. ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆದಿದ್ದರೂ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿದಾಗ ಮಾತ್ರ ದೇಶ ಉದ್ಧಾರವಾಗಲು ಸಾಧ್ಯವಾಗಲಿದೆ ಎಂದರು.
ಪ್ರಥಮ ಜಗದ್ಗುರುಗಳು ಪಂಚಮಸಾಲಿ ಪೀಠ ಕೂಡಲಸಂಗಮ ಪೂಜ್ಯ ಶ್ರೀ ಬಸವಜಯ ಮೃತ್ಯಂಜಯ ಮಹಾಸ್ವಾಮಿಗಳು ಮಾತನಾಡಿ ಕೃಷಿ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರು ಕೆಲಸವಿಲ್ಲದೆ ದೊಡ್ಡ ದೊಡ್ಡ ಪಟ್ಟಣಗಳಿಗೆ ಗೂಳೆ ಹೋಗುತ್ತಿದ್ದಾರೆ. ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಚಟುವಟಿಕೆಗಳಿಗೆ ಅಳವಡಿಸಿ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು. ಹಿಂಗಾರು ಬಿತ್ತನೆ ಮಾಡಿದ ರೈತರಿಗೆ ಕೃಷಿ ಉಪಕರಣಗಳು ಸಕಾಲಕ್ಕೆ ಸಿಗದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಯಾವುದೇ ಸ್ಥಾರ್ಥ ಇಲ್ಲದೇ ದೇಶಕ್ಕಾಗಿ ದುಡಿಯುವ ರೈತರ ಸರ್ಕಾರ ನಿಲ್ಲಬೇಕು ಎಂದರು.
ಉತ್ತರ ಕರ್ನಾಟಕ ಹಸಿರು ಸೇನೆಯ ಗೌರವಧ್ಯಕ್ಷರು ಹಾಗೂ ಪೂಜ್ಯ ಶ್ರೀ ಡಾ.ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀಗಿರಿ ಮಠ ಲಕ್ಷಿö್ಮÃಪುರ, ಸುಕ್ಷೇತ್ರ ಹುಲಿಜಂತಿಯ ಪೂಜ್ಯ ಶ್ರೀ ಮಾಳಿಂಗರಾಯ ಮಹಾರಾಜರು, ಪೂಜ್ಯ ಶ್ರೀ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿAಗ ಮಹಾರಾಜರು, ಸೊಂತ ಮತ್ತು ಕಲ್ಮುಡ, ಪೂಜ್ಯ ಸೋಮೇಶ್ವÀರ ಮಹಾಸ್ವಾಮಿಗಳು ಮುಖನಾಪುರ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.
ರೈತ ಸಂಘಗಳ ಏಕೀಕರಣ ಸಮಿತಿ ರಾಜ್ಯ ವರಿಷ್ಠರು ಪಚ್ಚೆ ನಂಜುAಡಸ್ವಾಮಿ ಉದ್ಘಾಟಿಸಿದರು. ಕ.ರಾ.ರೈ.ಸಂಘ ಹಸಿರು ಸೇನೆಯ ರಾಜ್ಯಧ್ಯಕ್ಷ ಚೂನಪ್ಪ ಪೂಜೇರಿ ಅಧ್ಯಕ್ಷತೆ ವಹಿಸಿದ್ದರು. ಮತ್ತು ಕಾರ್ಯಕ್ರಮದಲ್ಲಿ ಹಲವು ಸಾಧಕ ರೈತರಿಗೆ ಸಮಾಜ ಸೇವಾರತ್ನ, ರೈತ ರತ್ನ, ಕನ್ನಡ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹೇಶಗೌಡ ಸುಬೇದಾರ, ಬಸವಂತರೆಡ್ಡಿ ಸಾಹು, ಡಾ,ಚಂದ್ರಶೇಖರ ಸುಬೇದಾರ, ಶ್ರೀಕಾಂತಗೌಡ ಸುಬೇದಾರ, ಮಹಾಂತಗೌಡ ಸುಬೇದಾರ, ಡಾ.ಶಿವುರಾಜ ದೇಶಮುಖ, ಶಾಂತವೀರಪ್ಪ ಪೊಲೀಸ ಪಾಟೀಲ, ಚಂದನಗೌಡ ಪಾಟೀಲ್, ದೇವಿಂದ್ರಪ್ಪಗೌಡ ಮಾಲಗತ್ತಿ, ಮಹೇಶ ಜಕಾತಿ, ಶಂಕರ, ಶಿವುರೆಡ್ಡಿ, ರಾಕೇಶಗೌಡ ಸೇರಿದಂತೆ ರೈತರು ಇದ್ದರು.
ಬಾಕ್ಸ್;
ರಾರಾಜಿಸಿದ ಹಸಿರು ಟವೆಲ್
ಸಮಾವೇಶದಲ್ಲಿ ಭಾಗವಹಿಸಿದ್ದ ಬಹುತೇಕ ಗಣ್ಯರು, ಮುಖಂಡರು ಹಸಿರು ಟವೆಲ್ ಹಾಕಿದ್ದರು. ಸಮಾವೇಶದ ಮಟ್ಟಿಗೆ ಎಲ್ಲರೂ ರೈತರಾಗಿದ್ದರೂ. ಒಂದಷ್ಟು ಮಂದಿ ಟವೆಲ್‌ಗಳನ್ನು ತಿರುಗಿಸುತ್ತಾ ರೈತಪರ ಘೋಷಣೆಗಳನ್ನು ಮೊಳಗಿಸಿದರು. ನಗರದ ಸರ್ಕಾರಿ ಪಶು ಆಸ್ಪತ್ರೆ ಹೊಸ ನಿಲ್ದಾಣದಿಂದ ಆರಭೋಳ ಕಲ್ಯಾಣ ಮಂಟಪದ ವರೆಗೆ ಟ್ರಾö್ಯಕ್ಟರ್ ಮತ್ತು ಎತ್ತಿನಬಂಡಿ ಬೃಹತ್ ಮೆರವಣಿಗೆ ಜರುಗಿತು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771