
ಶಹಾಪುರ:- ನಗರದ ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್‌ಗೆ ೨೦೨೫ರಿಂದ ಮುಂದಿನ ೫ವರ್ಷಗಳ ಅವಧಿಗಾಗಿ ನಿರ್ದೇಶಕ ಮಂಡಳಿಗೆ ಭಾನುವಾರ ಚುನಾವಣೆ ಶಾಂತಿಯುತವಾಗಿ ಜರುಗಿತು.೧೫ಸ್ಥಾನಗಳಿಗಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ೧೪ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಘೇವರಚಂದ್ ಜೈನ್ ಮತ್ತು ರೇವಣಸಿದ್ದಪ್ಪ ಕಲಬುರಗಿ ಪೆನಲ್‌ಗೆ ಭರ್ಜರಿ ಜಯ ಸಿಕ್ಕಿದೆ.
ಸಾಮಾನ್ಯ ಸ್ಥಾನದ ೯ಸದಸ್ಯರಲ್ಲಿ ಅಭ್ಯರ್ಥಿಗಳಾದ ಅಶೋಕಕುಮಾರ ಕರೆಗೇರ,ಘೇವರಚಂದ ಜೈನ್,ರಾಜಕುಮಾರ ಮುಡಬೂಳ,ರುದ್ರಗೌಡ,ರೇವಣಸಿದ್ದಪ್ಪ ಕಲಬುರಗಿ,ರೇವಣಸಿದ್ದಯ್ಯ ಚಿಕ್ಕಮಠ,ಶಂಕರಗೌಡ ಪಾಟೀಲ ಹುಲಕಲ್,ಬಸವರಾಜ ಅರುಣಿ,ಸುರೇಶ ದೇಸಾಯಿ, ಮಹಿಳೆಯರಲ್ಲಿ ಅನ್ನಪೂರ್ಣ ಮುಂಡಾಸ, ನಿರ್ಮಲಾ ಉಪ್ಪಿನ್, ಪಜಾತಿ ಅಭ್ಯರ್ಥಿ ಲಕ್ಷö್ಮಣ ದಿಗ್ಗಾವಿ ನೂತನ ನಿರ್ದೇಶಕರಾಗಿದ್ದು ಮಹಾದೇವಪ್ಪ ಸಾಲಿಮನಿ, ನಯೀಮ್ ಪಟೇಲ್,ಹಣಮಂತ ದೊರೆ ಟೋಕಾಪುರ ಅವಿರೋಧವಾಗಿ ಆಯ್ಕೆಯಾದವರಾಗಿದ್ದಾರೆಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ ಛಲವಾದಿ ತಿಳಿಸಿದ್ದಾರೆ.ಆಯ್ಕೆಯಾದ ನೂತನ ಸದಸ್ಯರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.