
ಶಹಾಪುರ; ಸನ್ನತಿಯಲ್ಲಿ ಐತಿಹಾಸಿಕ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ ಹಿನ್ನಲೇ ದಿ.೧೨ ರಂದು ತ್ರಿಪಿಟಕ ಸದ್ಧಮ್ಮ ಸಜ್ಜಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಾಬಾ ಸಾಹೇಬರ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಬೌದ್ಧ ಮಹಸ್ತೂಪ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಾಯಿಬಣ್ಣ ಬನ್ನಟ್ಟಿ ಮನವಿ ಮಾಡಿದ್ದಾರೆ.
ಫೆ. ೧೨ ರಂದು ಬುಧವಾರ ಚಿತ್ತಾಪೂರ ತಾಲೂಕಿನ ಸನ್ನತಿಯ(ಕನಗನಹಳ್ಳಿ)ಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೆಂಗಳೂರಿನ ಮಹಾಭೋಧಿ ಸೂಸೈಟಿ ಅಧ್ಯಕ್ಷರು ಪೂಜ್ಯ ಭಂತೆ ಕಶ್ಯಪ ಮಹಾಥೇರಾ, ಬೆಂಗಳೂರಿನ ಮಹಾಭೋಧಿ ಸೂಸೈಟಿ ಪ್ರಧಾನÀ ಕಾರ್ಯದರ್ಶಿ ಪೂಜ್ಯ ಭಂತೆ ಆನಂದ ಥೇರಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕೊಳ್ಳಲಿದ್ದಾರೆ. ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ ಹಾಗೂ ಐಟಿ ಮತ್ತು ಬಿಟಿ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಎಮ್. ಖರ್ಗೆ ಧಮ್ಮ ಧ್ವಜಾರೋಹಣ ಹಾಗೂ ಘನ ಉಪಸ್ಥಿತಿ ಇರಲಿದ್ದಾರೆ. ಸಂಸದ ರಾಧಾಕೃಷ್ಣ ದೊಡ್ಡಮನಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬೌದ್ಧ ಉಪಸಕರು ಹರ್ಷಕುಮಾರ ಕುಗ್ವೆ ಅವರು ಬೌದ್ಧ ಧರ್ಮ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಸನ್ನತಿ ಗ್ರಾ.ಪಂ ಅಧ್ಯಕ್ಷೆ ಅನ್ನಪೂರ್ಣ ಸಾಯಿಬಣ್ಣ ಬನ್ನಟ್ಟಿ ಅವರು ಮಹಾದ್ವಾರದಿಂದ ಧಮ್ಮ ಜಾಥ ಉದ್ಘಾಟಿಸಲಿದ್ದಾರೆ. ಐಟಿಸಿಸಿ ಅಮೇರಿಕಾದ ಸಂಸ್ಥಾಪಕರು ವಾಗ್ಮೋ ದಿಕ್ಷಿ ಅವರು ಸಾಮ್ರಟ ಅಶೋಕ ಪುತ್ಥಳಿಕೆ ಮಾಲಾರ್ಪಣೆ ನೇರವೆರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದ ಹೇಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ