September 8, 2025

ಔರಾದ : ನಾಡಿನ ಸುಪ್ರಸಿದ್ಧ ಔರಾದ ಸುಕ್ಷೇತ್ರ ಉದ್ಭವಲಿಂಗ ಶ್ರೀ ಅಮರೇಶ್ವರರ ಜಾತ್ರಾ ಮಹೋತ್ಸವಕ್ಕೆ ನೂರಾರು ಭಕ್ತರ ಸಮ್ಮುಖ ದೇವಸ್ಥಾನದ ಆವರಣದಲ್ಲಿ ರಥವನ್ನು ಜೋಡಿಸಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಗುರುವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಐತಿಹಾಸಿಕ ಶ್ರೀ ಅಮರೇಶ್ವರ ಜಾತ್ರೆಯು ಪ್ರತಿ ವರ್ಷದಂತೆ ಅರ್ಥಪೂರ್ಣವಾಗಿ ಆಚರಿಸಲಾಗುವುದು, ಸತತವಾಗಿ ವಾರದ ಕಾಲ ನಡೆಯುವ ಐತಿಹಾಸಿಕ ಜಾತ್ರೆಗೆ ನೆರೆಯ ಮಹಾರಾಷ್ಟ್ರ ತೆಲಂಗಾಣ ರಾಜ್ಯದ ಭಕ್ತರು ಆಗಮಿಸುತ್ತಾರೆ. ಫೇ.23ರಿಂದ ಮಾರ್ಚ.03 ವರೆಗೆ ನಡೆಯುವ ಜಾತ್ರಾ ಮಹೋತ್ಸವ ಯಶಸ್ವಿಗೆ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಮುಖಂಡರು ಮತ್ತು ಎಲ್ಲಾ ಅಧಿಕಾರಿ ವರ್ಗದವರು ಸಹಕರಿಸಬೇಕು ತಸೀಲ್ದಾರ ಮಲಶೆಟ್ಟಿ ಚಿದ್ರೆ ತಿಳಿಸಿದ್ದಾರೆ.

ಫೇ. 23 ರಿಂದ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಜನೆ, ಕೀರ್ತನೆಗಳು ನಡೆಯಲಿವೆ. ಫೇ.23 ಪಾದಪೂಜೆ, 24 ರಂದು ಭಜನೆ ಕಿರ್ತನೆ, 25 ರಂದು ಸಂಗೀತ ದರ್ಬಾರ, 26 ರಂದು ಅಗ್ನಿಪೂಜೆ, 27 ರಥೋತ್ಸವ, 28 ಜಂಗಿ ಕುಸ್ತಿ, ಮಾರ್ಚ 03 ರಂದು ಪಶು ಪ್ರದರ್ಶನ ಜರುಗಲಿದೆ.

ಈ ಸಂಧರ್ಭದಲ್ಲಿ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಅಮರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ, ಯುವ ಸಮೂಹ ಜಾತ್ರೆಯಲ್ಲಿ ಪಾಲ್ಗೊಂಡು ಅಹಿತಕರ ಘಟನೆ ನಡೆಯದಂತೆ ಹಾಗೂ ನೆರೆಯ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ಭಕ್ತರು ಪಾಲ್ಗೊಳ್ಳುತ್ತಾರೆ, ಯುವಕರು ಜಾತ್ರೆಯಲ್ಲಿ ತನು ಮನದಿಂದ ಸಹಕರಿಸಿ ಜಾತ್ರಾ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಪ್ರಚಾರಾರ್ಥ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಡಾ.ಶಂಕರರಾವ ದೇಶಮುಖ, ಸುನಿಲ ಕುಮಾರ್ ದೇಶಮುಖ, ಶರಣಪ್ಪ ಪಂಚಾಕ್ಷರಿ, ದಯಾನಂದ ಘೂಳೆ, ಶಿವರಾಜ ಅಲ್ಮಾಜೆ, ಬಸವರಾಜ ಚ್ಯಾರೆ, ಸೂರ್ಯಕಾಂತ ಬುಟ್ಟೆ, ಅಮರೇಶ ಮಸ್ಕಲೆ, ಸೂರ್ಯಕಾಂತ ಚ್ಯಾರೆ, ಸಂತೋಷ ಕೋಳಿ, ಸಿದ್ರಾಮ ಹಳೆಂಬುರೆ, ಸತೀಶ್ ಜ್ಯಾಂತೆ, ಭದ್ರಿನಾಥ ಪಾಂಚಾಳ, ಸಿದ್ರಾಮ ಬಾವಗೆ, ಸಚಿನ ಶ್ರೀಕಾಂತ ಅಲ್ಮಾಜೆ, ಬಾಬುರಾವ ಔರಾದೆ, ಬಾವಗೆ, ಆನಂದ ಪಾಂಚಾಳ, ಈಶ್ವರ ಚಿಟ್ಮೆ, ಶಿವಾನಂದ ಕನಕೆ, ಸಂದೀಪ ಪಾಟೀಲ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771