
ಔರಾದ್:- ಉತ್ತಮ ಸಮಾಜ ನಿರ್ಮಾಣದ ಸಲುವಾಗಿ ವಿದ್ಯಾರ್ಥಿಗಳು ದುಶ್ಚಟ, ದುರಭ್ಯಾಸ ರೂಢಿಸಿಕೊಳ್ಳಬಾರದು ಎಂದು ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ಘುಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ಪಟ್ಟಣದ ಆದರ್ಶ ಪ್ರೌಢಶಾಲೆಯ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭವಿಷ್ಯ ರೂಪಿಸಿಕೊಳ್ಳಲು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಹತ್ವದ ಹಂತವಾಗಿದೆ, ಆದ್ದರಿಂದ ಈ ಹಂತದಲ್ಲಿ ಸಿಗುವ ಸ್ವಾತಂತ್ರ್ಯ ಉತ್ತಮ ಉದ್ದೇಶಕ್ಕೆ ಬಳಕೆಯಾಗಬೇಕು. ಸ್ನೇಹಿತರು, ಬಂಧು ಎಂದು ಹೇಳಿಕೊಂಡು ತಪ್ಪು ದಾರಿಗೆ ಎಳೆಯುವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಅಮೃತ್ ರಾವ್ ಬಿರಾದರ್, ಆದರ್ಶ ಮಹಾವಿದ್ಯಾಲಯ ಔರಾದ್ ಪ್ರಾಂಸುಪಾಲ್ ಇನ್ನಾಯತ್ ಅಲಿ ಸೌದಾಗರ್, ತಾಲೂಕಿನ ಯೋಜನಾಧಿಕಾರಿಗಳಾದ ರಾಘವೇಂದ್ರ, ವಲಯದ ಮೇಲ್ವಿಚಾರಕರು ಅನಿಲ್ ದಾವಣೆ, ಸೇವಾಪ್ರತಿನಿಧಿ ಸುರೇಖಾ ಮತ್ತು ಕಾವೇರಿ ಉಪಸ್ಥಿತರಿದ್ದರು.