
ಬೀದರ:-ಚೆಸ್ ಪಂದ್ಯಾಗಳು ತಮ್ಮ ಕಾರ್ಯತಂತ್ರದ ಕೌಶಲ್ಯ ಮತ್ತು ಬುದ್ದಿ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಮಾನ್ಯ ಡಾ. ಗಿರೀಶ್ ದಿಲೀಪ್ ಬದೋಲೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ ಕಚೇರಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಬೀದರ ಸಹಯೋಗದಲ್ಲಿ ” ಮಕ್ಕಳ ಸ್ನೇಹಿ ಅಭಿಯಾನ ” ದಡಿ ಹಮ್ಮಿಕೊಂಡ *ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ* ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಯುವ ಆಟಗಾರರಲ್ಲಿ ಪ್ರತಿಭೆಯನ್ನು ಬೆಳೆಸುವ ಮತ್ತು ಕ್ರೀಡಾ ಮನೋಭಾವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಜಿಲ್ಲೆಯ ಎಂಟು ತಾಲೂಕಿನಿಂದ ಒಟ್ಟು 16 ಮಕ್ಕಳು ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ, ಪಂದ್ಯದ ಒಟ್ಟು ನಾಲ್ಕು ಸುತ್ತಿನಲ್ಲಿ ಅಂತಿಮವಾಗಿ ಕೃಷ್ಣ ತಂದೆ ಬಸವರಾಜ ( ತಾಲೂಕು :ಹೂಲಸೂರ ) ಪ್ರಥಮ ಮತ್ತು ಯೋಗೇಶ್ ತಂದೆ ಬಸವರಾಜ ( ತಾಲೂಕು : ಕಮಾಲನಗರ ) ದ್ವಿತೀಯ ಬಹುಮಾನ ಪಡೆದಿರುವುದು ತುಂಬಾ ಸಂತೋಷದ ಸಂಗತಿ ಈ ಪಂದ್ಯಾವಳಿಯಲ್ಲಿ ಸೋಲು ಅನುಭವಿಸಿದವರು ಮುಂದಿನ ಗೆಲುವಿಗೆ ಪ್ರಯತ್ನ ಮಾಡಬೇಕು ಸೋಲು ಗೆಲವು ಜೀವನದಲ್ಲಿ ಸಹಜ ಎಂದರು.