September 8, 2025

ಔರಾದ:-ಕಲ್ಯಾಣ ನಾಡಿನ ಶಿವಶರಣರಾದ ಪವಾಡ ಪುರುಷರು ಕಾಯಕ ಯೋಗಿಗಳು ತ್ರಿವಿಧ ದಾಸೋಹ ಮೂರ್ತಿಗಳಾದ ಶ್ರೀ ರೇವಪ್ಪಯ್ಯ ಶಿವಶರಣರ 20ನೇ ಜಾತ್ರಾ ಮಹೋತ್ಸವ ದಿನಾಂಕ 24-12-2024 00 25-12-2024 ರಂದು ಔರಾದ ತಾಲೂಕಿನ ಬಲ್ಲೂರ (ಜೆ) ಗ್ರಾಮದಲ್ಲಿ ಅಧೂರಿಯಾಗಿ ನಡೆಯಲಿದ್ದೆ ಎಂದು
ಶರಣಪ್ಪ ಬಲ್ಲೂರ ವಕೀಲರು ಮಾಜಿ ಜಿ.ಪಂ. ಸದಸ್ಯರು ತಿಳಿಸಿದರು.

ದಿನಾಂಕ 24-12-2024. ಮಂಗಳವಾರ ರಂದು ಶ್ರೀ ಶರಣವರೇಣ್ಯ ಸದ್ಗುರು ಮಹಾತ್ಮ ರೇವಪ್ಪಯ್ಯಾ ಶಿವಯೋಗಿ ಮಹಾ ಪ್ರವಾದಿ ಅಪ್ಪನವರ ನಿಯಮದಂತೆ 21 ಜಂಗಮರು ಮತ್ತು 5 ಮುತ್ತೈದಿಯರ ಪೂಜೆ ಮಾಡಲಾಗುತ್ತದೆ, ಹಾಗೂ ಪಾದಪೂಜೆ ನೇರೆವರಿಸಲಾಗುವುದು,
ಗಣಾರಾಧನೆ ಹಾಗೂ ಮಹಪ್ರಸಾದ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ.

25-12-2024,ರಂದು ಜಾತ್ರೆ ಮಹೋತ್ಸವ ಇರುತ್ತದೆ,
ಕಾರ್ಯಕ್ರಮಕ್ಕೆ ಸಂಸದ ಸಾಗರ ಖಂಡ್ರೆ,
ಮಾಜಿ ಕೆಂದ್ರ ಮಂತ್ರಿಗಳಾದ ಭಗವಂತ ಖೂಬಾ,
ಮಾಜಿ ಮಂತ್ರಿ ಹಾಲಿ ಶಾಸಕರಾದ ಪ್ರಭು ಬಿ. ಚವ್ಹಾಣ,
ಉಮಾಕಾಂತ ನಾಗಮರಪಳ್ಳಿ ನಿರ್ದೇಶಕರು, ಡಿ.ಸಿ.ಸಿ.ಬ್ಯಾಂಕ್ ಬೀದರ,ಸೂರ್ಯಕಾಂತ ಅಲ್ಯಾಜೆ
ಪ್ರಥಮ ದರ್ಜೆಗುತ್ತಿಗೆದಾರರು,ಜಗದೀಶ ಬೂಬಾ
ಪ್ರಥಮ ದರ್ಜೆಗುತ್ತಿಗೆದಾರರು, ಹಾಗೂ ಹಿರಿಯ ಕಲಾವಿದರು, ಬಸವರಾಜ ಶೆಟಗಾರ, ದುಬಲಗುಂಡಿ,
ಗುರುಪಾದಯ್ಯ ಸ್ವಾಮಿ, ಶ್ರೀಮಂಡಲ,ನಾಗನಾಥ ಪಾಂಚಾಳ, ಬಲ್ಲೂರ,ಗುಂಡಪ್ಪಾ ಪಾಂಚಾಳ ಬಲ್ಲೂರ,
ಶಾಂತವೀರ ಸ್ವಾಮಿ ನನಾವದಗಿ,ರಮಾಕಾಂತ ಪಾಂಚಾಳ ನಾವದಗಿ,ಬಸವರಾಜ ಘಿವಾರಿ ಗೋಕಾಕ,ಜಾತ್ರೆಯಲ್ಲಿ ಪಾಲಗೋಳುವರು.

ಸಾಯಂಕಾಲ ಬಲ್ಲೂರ ಗ್ರಾಮದ ಶ್ರೀ ರೇವಪ್ಪಯ್ಯಾ ಯುವಕ ಮಂಡಳದಿಂದ ಭವ್ಯ ಮೆರವಣಿಗೆ ಹಾಗೂ
ಯುವಕ-ಯುವತಿಯರಿಂದ ಕೋಲಾಟ

ಸಂಗೀತ ಸಂಜೆ :- ರಾತ್ರಿ 10.00 ಗಂಟೆಯಿಂದ ಜಿರ್ಗಾ, ಕೌರಾ (ಕೆ), ಕೌರಾ (ಬಿ), ಆಲೂರ (ಕೆ), ಗಡಿಕುಕನೂರ ಶ್ರೀ ಸಿದ್ದಾರೂಢ ಭಜನ ಮಂಡಳಿ ಚಳಕಾಪೂರ, ಶ್ರೀ ಭವಾನಿ ಭಜನ ಮಂಡಳಿ ಶ್ರೀಮಂಡಲ, ಶ್ರೀ ಬಸವೇಶ್ವರ ಭಜನ ಮಂಡಳಿ ಬೋರಗಿ, ಲಾಧಾ ಭಜನ ಮಂಡಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಜನೆ ಕಾರ್ಯಕ್ರಮ ನಡೆಸಲಾಗುವುದು.

ನಮ್ಮೂರು ಜಾತ್ರೆಗೆ ಮಹಾರಾಷ್ಟ್ರ,ತೆಲಂಗಾಣ, ಜಿಲ್ಲೆಯ, ಹೋರ ಜಿಲ್ಲೆಯ ಜನರು ಬರುತ್ತಾರೆ,ಜಾತ್ರೆ ವಿಜೃಂಭಣೆಯಿಂದ ಆಚರಿಸೋಣ ಪವಾಡ ಪುರುಷ
ರೇವಪಯ್ಯ ಸ್ವಾಮಿಯ ಜಾತ್ರೆಗೆ ಬಂದು ದೇವರ ದರ್ಶನ ಪಡೆದು ಪಾವನರಾಗೋನಾ ಎಂದು
ಶರಣಪ್ಪ ಬಲ್ಲೂರ ವಕೀಲರು ಮಾಜಿ ಜಿ.ಪಂ. ಸದಸ್ಯರು,ಹಾಗೂ ಸಮಸ್ತ ಬಲ್ಲೂರ (ಜೆ)
ಗ್ರಾಮಸ್ಥರು,ಕೋರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771